ಮೋದಿ ಪ್ರಧಾನ ಸಲಹೆಗಾರ ಪಿ.ಕೆ ಸಿನ್ಹಾ ರಾಜೀನಾಮೆ

1 min read
PM Modi's

ಮೋದಿ ಪ್ರಧಾನ ಸಲಹೆಗಾರ ಪಿ.ಕೆ ಸಿನ್ಹಾ ರಾಜೀನಾಮೆ

PM Modi’s principal advisor P K Sinha resigns

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಸಲಹೆಗಾರರಾಗಿದ್ದ ಪ್ರದೀಪ್ ಕುಮಾರ್ ನಿನ್ಹಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಪಿಕೆ ಸಿನ್ಹಾ ಅವರು ಈ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

PM Modi's

1977ನೇ ಬ್ಯಾಚ್ ನ ನಿವೃತ್ತಿ ಐಎಎಸ್ ಅಧಿಕಾರಿಯಾಗಿರುವ ಸಿನ್ಹಾ ಅವರನ್ನ 2019ರ ಆಗಸ್ಟ್ ತಿಂಗಳಲ್ಲಿ ಮೋದಿಯವರ ಪ್ರಧಾನ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಇದಲ್ಲದೆ ಸಿನ್ಹಾ ಅವರು ನಾಲ್ಕು ವರ್ಷಗಳ ಕಾಲ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಸಿನ್ಹಾ ಅವರು ಭಾರತದ 31ನೇ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ, ಅದಕ್ಕೂ ಮೊದಲು ಭಾರತದ ವಿದ್ಯುತ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd