ಟೋಕಿಯೋ ಒಲಿಂಪಿಕ್ಸ್ – ಜುಲೈ 13ರಂದು ಭಾರತದ ಕ್ರೀಡಾಪಟುಗಳ ಜೊತೆ ಪ್ರಧಾನಿ ಸಂವಾದ

1 min read

ಟೋಕಿಯೋ ಒಲಿಂಪಿಕ್ಸ್ – ಜುಲೈ 13ರಂದು ಭಾರತದ ಕ್ರೀಡಾಪಟುಗಳ ಜೊತೆ ಪ್ರಧಾನಿ ಸಂವಾದ

pm modiಟೋಕಿಯೊ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಕ್ರೀಡಾಪಟುಗಳ ಜೊತೆ ಜುಲೈ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಲಿದ್ದಾರೆ.
2021ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧೆ ಮಾಡುವ ಮೊದಲ ಬ್ಯಾಚ್ ನ ಕ್ರೀಡಾಪಟುಗಳು ಪ್ರಧಾನಿಯವರ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕೋವಿಡ್ ಸೋಂಕಿನ ಮಾರ್ಗಸೂಚಿಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ವರ್ಚ್‍ವಲ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಭಾರತೀಯ ಕ್ರೀಡಾಪಟುಗಳಿಗೆ ಸ್ಪೂರ್ತಿಯನ್ನು ಪ್ರಧಾನಿ ತುಂಬಲಿದ್ದಾರೆ.
130 ಕೋಟಿ ಜನ ಸಂಖ್ಯೆಯನ್ನು ಹೊಂದಿರುವ ಭಾರತ ದೇಶವನ್ನು ಕೇವಲ 120 ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದಾರೆ. ಆದ್ರೂ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಚಾರ. ಹೀಗಿ ಜುಲೈ 13ರಂದು ಪ್ರಧಾನಿಯ ಸಂವಾದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ಶುಭ ಹಾರೈಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಜುಲೈ 17ರಂದು ಟೋಕಿಯೋಗೆ ಭಾರತದ ಮೊದಲ ತಂಡ ಪ್ರಯಾಣ ಬೆಳೆಸಲಿದೆ. ಆದ್ರೆ ಮೊದಲ ಬ್ಯಾಚ್ ನಲ್ಲಿ ಎಷ್ಟು ಕ್ರೀಡಾಪಟುಗಳು ತೆರಳುತ್ತಾರೆ ಎಂಬುದನ್ನು ಭಾರತೀಯ ಒಲಿಂಪಿಕ್ಸ್ ಸಮಿತಿ ಇನ್ನು ಹೇಳಿಲ್ಲ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd