PMGKAY: ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ – ಡಿಸೆಂಬರ್ ವರೆಗೆ ಉಚಿತ ಪಡಿತರ…
ಬಡವರಿಗೆ ಉಚಿತ ದವಸ ಧಾನ್ಯಗಳನ್ನು ನೀಡುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅವಧಿಯನ್ನು ಸರ್ಕಾರವು ಮೂರು ತಿಂಗಳವರೆಗೆ ಅಂದರೆ ಡಿಸೆಂಬರ್ 2022 ರವರೆಗೆ ವಿಸ್ತರಿಸಿದೆ. ಇದಕ್ಕೆ 44,700 ಕೋಟಿ ರೂ ಹಣವನ್ನ ಕೇಂದ್ರ ಸರ್ಕಾರ ಮೀಸಲಿಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಯೋಜನೆಯನ್ನು ಮೂರು ತಿಂಗಳು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯೋಜನೆಯಡಿ 80 ಕೋಟಿ ಬಡವರಿಗೆ ಪ್ರತಿ ತಿಂಗಳು ಐದು ಕೆಜಿ ಗೋಧಿ ಮತ್ತು ಅಕ್ಕಿ ನೀಡಲಾಗುತ್ತದೆ. ಈ ಯೋಜನೆಯು ಸೆಪ್ಟೆಂಬರ್ 30 ಶುಕ್ರವಾರದಂದು ಕೊನೆಗೊಳ್ಳುತ್ತಿತ್ತು. ಇದನ್ನು ಮೂರು ತಿಂಗಳವರೆಗೆ ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್, 2022 ರವರೆಗೆ ವಿಸ್ತರಿಸಲಾಗಿದೆ ಎಂದು ಅನುರಾಗ್ ಠಾಕೂರ್ ಹೇಳಳಿದ್ದಾರೆ.
2020 ರ ಏಪ್ರಿಲ್‌ನಲ್ಲಿ ಪ್ರಾರಂಭವಾದಾಗಿನಿಂದ ಸರ್ಕಾರವು PMGKAY ಗಾಗಿ 3.45 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು, ಮೂರು ತಿಂಗಳ ಕಾಲ ಯೋಜನೆಯನ್ನು ವಿಸ್ತರಿಸಿದ್ದರಿಂದ 44,762 ಕೋಟಿ ರೂ ಹೆಚ್ಚುವರಿ ವೆಚ್ಚವಾಗಲಿದೆ.
PMGKAY: The government extended the Garib Kalyan Anna Yojana to provide free ration to the poor for three months.








