‘ಪಾಪ್‍ಕಾರ್ನ್ ಮಂಕಿಟೈಗರ್’ ಇಂದು ರಾಜ್ಯದಾದ್ಯಂತ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಡಾಲಿ ಧನಂಜಯ್ ಹಾಗೂ ಸುಕ್ಕಾ ಸೂರಿ ಕಾಂಬಿನೇಷನ್‍ನ ಎರಡನೇ ಸಿನಿಮಾ ಇದಾಗಿದ್ದು, ನಿರೀಕ್ಷೆಯಂತೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
‘ಪಾಪ್‍ಪಾರ್ನ್ ಮಂಕಿಟೈಗರ್’ ಚಿತ್ರ ಅಂಡರ್‍ವರ್ಡ್ ಮತ್ತು ಅಪರಾಧ ಕಥಾಹಂದರದ ಸಿನಿಮಾವಾಗಿದೆ. ‘ಟಗರು’ ಸಿನಿಮಾದಲ್ಲಿ ಡಾಲಿ ಎಂಬ ಪಾತ್ರದ ಮೂಲಕ ಪ್ರೇಕ್ಷಕರ ಮೋಡಿ ಮಾಡಿದ್ದ ನಟ ಧನಂಜಯ್, ಮಂಕಿಟೈಗರ್‍ನಲ್ಲೂ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಮಂಕಿ ಸೀನ ಮತ್ತು ಟೈಗರ್ ಸೀನ ಎಂಬ ಎರಡು ಭಿನ್ನ ಶೇಡ್‍ನಲ್ಲಿ ಧನಂಜಯ ಕಾಣಿಸಿಕೊಂಡಿದ್ದಾರೆ. ತಮ್ಮ ಮನೋಜ್ಞ ಅಭಿಯನದ ಮೂಲಕ ಪ್ರೇಕ್ಷಕನ್ನ ರಂಜಿಸಲಿದ್ದಾರೆ.
ಚಿತ್ರದಲ್ಲಿ ಮಧ್ಯಂತರದವರೆಗೂ ಯಾವುದೇ ಹಾಡುಗಳು ಬರುವುದಿಲ್ಲ. ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್‍ಗಳಿದ್ದು, ಪ್ರೇಕ್ಷಕರನ್ನು ಕುರ್ಚಿಬಿಟ್ಟು ಏಳದಂತೆ ಮಾಡುತ್ತದೆ. ಎಂದಿನಂತೆ ಚಿತ್ರದಲ್ಲಿ ಕ್ರೈಂ ಲೋಕದ ವೈಭವೀಕರಣ ಹೆಚ್ಚಿದ್ದು, ವೇಗದ ಚಿತ್ರಕಥೆಯ ಕಾರಣದಿಂದ ಪ್ರೇಕ್ಷಕರನ್ನು ಈ ಸಿನಿಮಾ ಆಕರ್ಷಿಸುತ್ತಿದೆ. ಇನ್ನು, ಪಾರ್ಪ್‍ಕಾರ್ನ್ ಮಂಕಿಟೈಗರ್ ಗೆಲುವಿಗೆ ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಛಾಯಾಗ್ರಹಣ ಪ್ರಮುಖ ಪಾತ್ರವಹಿಸುತ್ತವೆ. ಒಟ್ಟಾರೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ದುನಿಯಾ ಸೂರಿ ‘ಪಾಪ್‍ಕಾರ್ನ್ ಮಂಕಿ ಟೈಗರ್’ ಮೂಲಕ ಮತ್ತೆ ತಮ್ಮ ನಿರ್ದೇಶನದ ಚಾರ್ಮ್ ಅನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.








