Pogaru
ಧ್ರುವ ಸರ್ಜಾ ‘ಪೊಗರು’ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ : ಯಾವಾಗ ಗೊತ್ತಾ..!
ಸ್ಯಾಂಡಲವುಡ್ ನ ಬಹುನಿರೀಕ್ಷೆಯ ಹೈಬಜೆಟ್ ಸಿನಿಮಾವಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ “ಪೊಗರು” ಚಿತ್ರದ ರಿಲೀಸ್ ಗಾಗಿ ಅಭಿಮಾನಿಗಳು ಕಾದುಕುಳಿತಿದ್ದಾರೆ. ಇದೀಗ ಧ್ರುವ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಪೊಗರು ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪೊಗರು ಸಿನಿಮಾದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದ್ದು, ರಿಲೀಸ್ ಗೆ ರೆಡಿಯಾಗಿದೆ. ಅಲ್ಲದೇ ಸಿನಿಮಾದ ರಿಲೀಸ್ ಡೇಟ್ ಸಹ ಘೋಷಣೆ ಆಗಿದೆ.
ಇದು ನನ್ನ ದೇಹ ನನ್ನಿಷ್ಟ ಬಂದಹಾಗೆ ಇರುತ್ತೇನೆ: ಅದನ್ನೆಲ್ಲಾ ಕೇಳೋಕೆ ನೀನ್ಯಾರು ಎಂದ ಗಾಯಕಿ..!
ಹೌದು.. ಪೋಸ್ಟ್ ಪ್ರಡಕ್ಷನ್ ಕೆಲಸದಲ್ಲಿ ಪೊಗರು ಸಿನಿಮಾತಂಡ ನಿರತವಾಗಿದೆ. ಇದೀಗ ಸಿನಿಮಾತಂಡದ ಕಡೆಯಿಂದ ರಿಲೀಸ್ ಬಗ್ಗೆ ಅಪ್ ಡೇಟ್ ಸಿಕ್ಕಿದೆ. ಅಂದ್ಹಾಗೆ ಪೊಗರು ಸಿನಿಮಾ ಡಿಸೆಂಬರ್ 25 ಕ್ರಿಸ್ಮಸ್ ಹಬ್ಬದ ವೇಳೆಗೆ ರಿಲೀಸ್ ಆಗಲಿದೆಯಂತೆ. ಅದು ಆಗದೇ ಇದ್ದ ಪಕ್ಷದಲ್ಲಿ ಮುಂದಿನ ವರ್ಷ ಅಂದ್ರೆ ಜನವರಿಯಲ್ಲಿ ಸಂಕ್ರಾಂತಿಗೆ ಸಿನಿಮಾ ರಿಲೀಸ್ ಆಗೋದು ಪಕ್ಕಾ ಎನ್ನಲಾಗ್ತಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ನಂದಕಿಶೋರ್ ಅವರೇ ಬಹಿರಂಗ ಪಡಿಸಿದ್ದಾರೆ.
ನಂದಕಿಶೋರ್ ಸಾರಥ್ಯದಲ್ಲಿ ಮೂಡಿ ಬಂದಿರುವ ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಇತ್ತ ಧ್ರುವ ಸರ್ಜಾ ಅವರು ಪೊಗರು ಬಳಿಕ ದುಬಾರಿ ಸಿನಿಮಾದದ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ. ಈಗಾಲೇ ದುಬಾರಿ ಚಿತ್ರದ ಸ್ಕ್ರಿಪ್ಟ್ ಪೂಜೆ ಸಹ ನೆರವೇರಿದೆ. ವಿಶೇಷ ಈ ಸಿನಿಮಾದಲ್ಲಿ ಮತ್ತೆ ಪೊಗರು ಕಾಂಬಿನೇಷ್
ಒಂದಾಗಲಿದೆ. ನಂದಕಿಶೋರ್ ಹಾಗೂ ಧ್ರುವ ಸರ್ಜಾ ಅವರ ಜೊಡಿ ದುಬಾರಿಯಲ್ಲಿ ಮತ್ತೆ ಒಂದಾಲಿದೆ.
Pogaru
‘ಮದಗಜ’ ಮೂರನೇ ಹಂತದ ಶೂಟಿಂಗ್ ಶೀಘ್ರವೇ ಆರಂಭ..! ಎಲ್ಲಿ, ಯಾವಾಗ ಗೊತ್ತಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








