2021 ರ ವಿಶ್ವಸುಂದರಿ ಪಟ್ಟ ಗೆದ್ದ ಪೋಲೆಂಡ್ ನ ಕರೋಲಿನಾ ಬಿಲಾವ್ಸ್ಕಾ
ಪೋಲಿಷ್ (ಪೋಲೆಂಡ್ ) ಸುಂದರಿ ಕೆರೊಲಿನಾ ಬಿಲಾವ್ಸ್ಕಾ 2021 ರ ವಿಶ್ವ ಸುಂದರಿ ಕಿರೀಟವನ್ನ ತಮ್ಮದಾಗಿಸಿಕೊಂಡಿದ್ದಾರೆ. ಪೋರ್ಟೊರಿಕೊದಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೇರಿಕನ್ ಸುಂದರಿ ಶ್ರೀ ಸೈನಿ ಮೊದಲ ರನ್ನರ್ ಅಪ್ ಹೊರಹೊಮ್ಮಿದ್ದಾರೆ. ಪಶ್ಚಿಮ ಆಫ್ರಿಕಾದ ಐವರಿ ಕೋಸ್ಟ್‌ನ ಒಲಿವಿಯಾ ಯೆಸೆಸ್ ಎರಡನೇ ರನ್ನರ್ ಅಪ್ ಗೆ ತೃಪ್ತಿ ಪಟ್ಟುಕೊಂಡಿದ್ದಾರೆ. . 2019 ವಿಶ್ವ ಸುಂದರಿ, ಟೋನಿ ಆನ್ ಸಿಂಗ್ 23 ವರ್ಷದ ಕೆರೊಲಿನಾ ಅವರಿಗೆ ಕಿರೀಟ ತೊಡಿಸಿದರು.
ಸ್ಪರ್ಧೆಯ ಮೊದಲ ರನ್ನರ್ ಅಪ್ ಆಗಿದ್ದ ಶ್ರೀ ಸೈನಿ ಮೂಲತಃ ಲುಧಿಯಾನದವರು. ಲುಧಿಯಾನದ ಮೇಜರ್ ಶಿವ ದೇವ್ ಸಿಂಗ್ ನಗರದಲ್ಲಿ ಜನಿಸಿದವರು. ಐದು ವರ್ಷದವಳಿದ್ದಾಗ, ಅವಳ ತಂದೆ ಸಂಜೀವ್ ಮತ್ತು ತಾಯಿ ಏಕ್ತಾ ಅಮೆರಿಕಾದ ವಾಷಿಂಗ್ಟನ್‌ಗೆ ಸ್ಥಳಾಂತರಗೊಂಡಿದ್ದರು. ವಿದ್ಯಾಭ್ಯಾಸದ ಜೊತೆಗೆ ಮಾಡೆಲಿಂಗ್ ಕೂಡ ಮಾಡಿಕೊಂಡಿದ್ದಾರೆ. ಈ ಹಿಂದೆ ಅವರು ಮಿಸ್ ಇಂಡಿಯಾ ಯುಎಸ್ಎ 2017 ಪ್ರಶಸ್ತಿಯನ್ನು ಗೆದ್ದಿದ್ದರು.
ವಿಶ್ವ ಸುಂದರಿ ಪಟ್ಟ ಗೆದ್ದಿರುವ ಕರೋಲಿನಾ ವೃತ್ತಿಯಲ್ಲಿ ರೂಪದರ್ಶಿ. ಆಕೆ ಪ್ರಸ್ತುತ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ. ಪದವಿ ಮುಗಿದ ನಂತರ ಪಿಎಚ್‌ಡಿ ಮಾಡಿ ಮೋಟಿವೇಷನ್ ಸ್ಪೀಕರ್ ಆಗಬೇಕೆಂದು ಬಯಸುತ್ತಿದ್ದಾರೆ. ಕೆರೊಲಿನಾ ಗೆ ಈಜು ಮತ್ತು ಸ್ಕೂಬಾ ಡೈವಿಂಗ್ ಅಂದರೆ ಅಚ್ಚುಮೆಚ್ಚು ಎಂದು ಹೇಳಿಕೊಂಡಿದ್ದಾರೆ. ಅದರ ಜೊತೆಗೆ ಟೆನಿಸ್ ಮತ್ತು ಬ್ಯಾಡ್ಮಿಂಟನ್ ಆಡುತ್ತಾ ಕಾಲ ಕಳೆಯುತ್ತಾರೆ.
https://www.instagram.com/p/CbMMkilN90n/?utm_source=ig_embed&ig_rid=9e53a3f3-923b-47af-8905-20a5a6c125bf
ಭಾರತದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಾನಸಾ ವಾರಣಾಸಿ ಅವರು ಟಾಪ್ 13 ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದರು, ಆದರೆ ಟಾಪ್ 6 ರೊಳಗೆ ಬರಲು ಸಾಧ್ಯವಾಗಲಿಲ್ಲ. ಭಾರತದ ಮಾನುಷಿ ಛಿಲ್ಲರ್ ಕೊನೆಯ ಬಾರಿಗೆ 2017 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದಿದ್ದರು. ಇಲ್ಲಿಯವರೆಗೆ ಭಾರತ 6 ವಿಶ್ವ ಸುಂದರಿ ಪ್ರಶಸ್ತಿಗಳನ್ನು ಪಡೆದಿದೆ.







