ಹೆದರಿಸಿ ಹಣ ನೀಡದೇ ಮಟನ್ ಬಿರಿಯಾನಿ ಕಟ್ಟಿಸಿಕೊಂಡ ಪೊಲೀಸರು – VIRAL
ಉತ್ತರ ಪ್ರದೇಶ : ಪೊಲೀಸ್ ಪೇದೆಗಳಿಬ್ಬರು , ಬೀದಿ ಬದಿ ವ್ಯಾಪಾರಿಗೆ ಬೆದರಿಸಿ ಹಣ ನೀಡದೇ ಮಟನ್ ಬಿರಿಯಾನಿ ಕಟ್ಟಿಸಿಕೊಂಡು ಹೋಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ..
ಉತ್ತರ ಪ್ರದೇಶದ ಐಶ್‍ಬಾಗ್ ಈದ್ಗಾ ಬಳಿ ಶಬ್ಬೀರ್ ಎಂಬವರು ತಳ್ಳುವ ಬಂಡಿಯಲ್ಲಿ ಬಿರಿಯಾನಿ ಅಂಗಡಿ ಹಾಕಿಕೊಂಡಿದ್ದಾರೆ. ಎಂದಿನಂತೆ ಗುರುವಾರ ಸಹ ಶಬ್ಬೀರ್ ವ್ಯಾಪಾರ ಮಾಡುತ್ತಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಪೊಲೀಸ್ ಪೇದೆಗಳಾದ ಮೊಹಮದ್ ಫೈಜ್ ಮತ್ತು ರಮನ್ ಎರಡು ಪ್ಲೇಟ್ ಮಟನ್ ಬಿರಿಯಾನಿ ಪಾರ್ಸೆಲ್ ತಗೆದುಕೊಂಡಿದ್ದಾರೆ.
ಇನ್ನೂ ಪೊಲೀಸರಿಬ್ಬರ ಕೃತ್ಯದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮೇಲಾಧಿಕಾರಿಗಳು ಅವರಿಬ್ಬರನ್ನೂ ಇಬ್ಬರನ್ನ ವರ್ಗಾವಣೆ ಮಾಡಿದ್ದಾರೆ.
ಪೊಲೀಸರು ಹೇಳಿದಂತೆ ಶಬ್ಬೀರ್ ಎರಡು ಪ್ಯಾಕೇಟ್ ನೀಡಿ ಹಣ ಕೇಳಿದ್ದಾರೆ. ಆದ್ರೆ ಇಬ್ಬರೂ ವ್ಯಾಪಾರಿಗೆ ಬೆದರಿಸಿ ಹಣ ನೀಡದೇ ಹಾಗೆ ಬೈಕ್ ನಲ್ಲಿ ತೆರಳಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲದೇ ಈ ವೀಡಿಯೋ ಠಾಣೆಯ ಮೇಲಾಧಿಕಾರಿ ಧನಂಜಯ್ ಸಿಂಗ್ ಅವರ ಗಮನಕ್ಕೂ ಬಂದಿದ್ದು, ವಿಷಯ ತಿಳಿಯುತ್ತಲೇ ನೇರವಾಗಿ ವ್ಯಾಪಾರಿ ಬಳಿ ತೆರಳಿ, ತಮ್ಮ ಪೇದೆಗಳಿಬ್ಬರ ಪರವಾಗಿ ಕ್ಷಮೆ ಕೇಳಿ ಶಬ್ಬೀರ್ ಗೆ 500 ರೂ. ಹಣ ನೀಡಿದ್ದಾರೆ.