ಚಪ್ಪಲಿ ಸಹಾಯದಿಂದ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು
ಪುಣೆ : ಅಕ್ಟೋಬರ್ ತಿಂಗಳ ನಡುವಲ್ಲಿ ನಾಪತ್ತೆಯಾಗಿದ್ದ 27 ವರ್ಷದ ವ್ಯಕ್ತಿಯ ಕೊಲೆ ಪ್ರಕರಣವನ್ನ , ಚಪ್ಪಲಿ ಸಹಾಯದಿಂದ ಪೊಲೀಸರು ಬೇಧಿಸಿರುವ ಘಟನೆಯು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಆತ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಪತಿ ಆತನನ್ನ ಕೊಲೆ ಮಾಡಿರುವುದನ್ನ ಪೊಲೀಸರು ತನಿಖೆ ವೇಳೆ ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಮನೆಯ ಮುಂಭಾಗದ ಅಂಗಳದಲ್ಲಿ ಸಂತ್ರಸ್ತ ಬಳಸಿದ ಚಪ್ಪಲಿಯನ್ನು ಪತ್ತೆ ಹಚ್ಚಿದ ಪೊಲೀಸರು ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬವ್ ಧಾನ್ ನಿವಾಸಿ 27 ವರ್ಷದ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಮೃತನ ತಾಯಿ ಸ್ವಲ್ಪ ದಿನಗಳ ಹಿಂದೆ ಮಗ ಕಾಣೆಯಾಗಿದ್ದಾಗಿ ದೂರು ನೀಡಿದ್ದರು. ಅಪಹರಣ ಸೇರಿದಂತೆ ವಿವಿಧ ಕೋನಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದರು. ತನಿಖೆಯ ವೇಳೆ ಮನೆಯೊಂದರ ಮುಂಭಾಗದ ಅಂಗಳದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಚಪ್ಪಲಿ ಪತ್ತೆಯಾಗಿತ್ತು. ಹೆಚ್ಚಿನ ತನಿಖೆಯಿಂದ ಆ ವ್ಯಕ್ತಿ ಬೇರೊಬ್ಬ ವ್ಯಕ್ತಿಯ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ವಿಚಾರ ಬಯಲಾಗಿದೆ. ಅಲ್ಲದೇ ಆತನ ಹೊಲದಲ್ಲಿ ಮೃತನ ಚಪ್ಪಲಿ ಪತ್ತೆಯಾಗಿದೆ ಎನ್ನಲಾಗಿದೆ. ಅಕ್ಟೋಬರ್ 21 ರ ರಾತ್ರಿ ತನ್ನ ಪತ್ನಿಯ ಫೋನ್ನಲ್ಲಿ ಎರಡು ಮಿಸ್ಡ್ ಕಾಲ್ಗಳನ್ನು ಪ್ರಮುಖ ಆರೋಪಿ ಗಮನಿಸಿದ್ದ. ಈ ಕರೆಗಳನ್ನು ಸಂತ್ರಸ್ತನ ಮೊಬೈಲ್ ಸಂಖ್ಯೆಯಿಂದ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ರಾತ್ರಿ ಸಂತ್ರಸ್ತ ( ಮೃತ ಯುವಕ) ಆರೋಪಿಯ ಪತ್ನಿಯನ್ನು ಭೇಟಿಯಾಗಲು ಬಂದಿದ್ದ. ಆಗ ಆರೋಪಿ ಮತ್ತು ಆತನ ಇಬ್ಬರು ಸಹಚರರು ಸಂತ್ರಸ್ತನ ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಂತರ ಮೂವರು ಸೇರಿ ಮೃತದೇಹವನ್ನ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಪುಣೆಯಲ್ಲಿ ಒಬ್ಬ ಸಹಚರನನ್ನು ಬಂಧಿಸಿದ ನಂತರ ಪ್ರಮುಖ ಆರೋಪಿ ಮತ್ತು ಆತನ ಸಹಾಯಕನನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ.