ಗರ್ಭಿಣಿಯನ್ನ 3 ಕಿ.ಮೀ ನಡೆಸಿದ ಸಬ್ ಇನ್ಸ್ ಇನ್ಸ್ ಪೆಕ್ಟರ್ ಅಮಾನತು..!
ಒಡಿಶಾ: ಇತ್ತೀಚೆಗೆ ಹೆಲ್ಮೆಟ್ ಧರಿಸದ ಕಾರಣಕ್ಕೆ ಗರ್ಭಿಣಿಗೆ 3 ಕಿ.ಮೀ ನಡೆಯುವಂತೆ ಮಾಡಿ ಕಿರುಕುಳ ನೀಡಿದ್ದ ಸರಾಟ್ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಕ್ಟರ್ ರೀನಾ ಬಕ್ಸಲ್ ರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತು ಮಾಡಿದ್ದಾರೆ.
ತನಗೆ ಮತ್ತು ತನ್ನ ಪತಿಗೆ ಠಾಣಾಧಿಕಾರಿ ಕಿರುಕುಳ ನೀಡಿದ್ದಾರೆ ಎಂದು ಗರ್ಭಿಣಿಯು ಆರೋಪಿಸಿದ್ದರು. ಇದಾದ ಬಳಿಕ ರೀನಾ ಬಕ್ಸಲ್ ರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಸ್ಪೆಂಡ್ ಮಾಡಿ ಆದೇಶ ಹೊರೆಡಿಸಿದ್ದಾರೆ.
ಗರ್ಭಿಣಿ ಗುರುಬಾರಿ ಅವರು ಆರೋಗ್ಯ ತಪಾಸಣೆ ಸಲುವಾಗಿ ಉದಲ ಉಪ ವಿಭಾಗೀಯ ಆರೋಗ್ಯ ಕೇಂದ್ರಕ್ಕೆ ತಮ್ಮ ಪತಿ ಬಿಕ್ರಮ್ ಬಿರುಲಿ ಅವರೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಿಕ್ರಮ್ ಹೆಲ್ಮೆಟ್ ಧರಿಸಿದ್ದರು. ಆದರೆ, ಗುರುಬಾರಿ ಅವರ ಬಳಿ ಇರಲಿಲ್ಲ.
ಹೀಗಾಗಿ ಬಿಕ್ರಮ್ ಅವರು, ತಮ್ಮ ಪತ್ನಿಯು ಆರೋಗ್ಯದ ಕಾರಣದಿಂದ ಹೆಲ್ಮೆಟ್ ಧರಿಸಿಲ್ಲ ಎಂದು ಮನವಿ ಮಾಡಿದ್ದಾರೆ. ಇದನ್ನು ಲೆಕ್ಕಿಸದ ಅಧಿಕಾರಿ ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ 500 ರೂ. ದಂಡ ಪಾವತಿಸುವಂತೆ ಸೂಚಿಸಿದ್ದಾರೆ.
ಅಷ್ಟಲ್ಲದೇ, ಗುರುಬಾರಿ ಅವರನ್ನು ಸ್ಥಳದಲ್ಲಿಯೇ ಬಿಟ್ಟು ಠಾಣೆಗೆ ಹೋಗಿ ದಂಡ ಪಾವತಿಸಿ ಬರುವಂತೆ ಬಿಕ್ರಮ್ ಅವರನ್ನು ಬಲವಂತ ಪಡಿಸಿದ್ದಾರೆ. ಬಳಿಕ ಗರ್ಭಿಣಿಯೂ ಉರಿಬಿಸಿಲಿನಲ್ಲಿ 3 ಕಿ.ಮೀ ದೂರದ ಠಾಣೆ ವರೆಗೆ ನಡೆದುಕೊಂಡು ಹೋಗಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಪೊಲೀಸ್ ಅಧಿಕಾರಿಯ ವಿರುದ್ಧ ತೀವ್ರ ಆಕ್ರೋಶವನ್ನೂ ಸಹ ಹೊರಹಾಕಿದ್ದರು.
ಅಭಿಮಾನಿ ತಾಯಿಯ ಆಸ್ಪತ್ರೆ ಬಿಲ್ ಪಾವತಿಸಿದ ಕಿಚ್ಚ ಸುದೀಪ್..!
ಹಾಲು ಖರೀದಿಸಲು ಹೋದ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಡೈರಿ ಮಾಲೀಕ..!