ತನ್ನ ವಿಶಿಷ್ಠ ವಾಸ್ತುಶಿಲ್ಪಕ್ಕೆ ಪಾಂಡಿಚೇರಿ ಖ್ಯಾತಿ..! ಶಾಪಿಂಗ್ ಪ್ರಿಯರ ಸ್ವರ್ಗ – ಇಂಟರೆಸ್ಟಿಂಗ್ ಫ್ಯಾಕ್ಟ್ಸ್
ತನ್ನದೇ ಹೆಸರಿನ ಕೇಂದ್ರಾಡಳಿತ ಪ್ರದೇಶದ ರಾಜಧಾನಿ ಪಾಂಡಿಚೆರಿ 2006 ದ ವರೆಗೆ ಪುದುಚೆರಿ ಎಂದು ಕರೆಯಿಸಿಕೊಳ್ಳುತ್ತಿತ್ತು. ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶಗಳೆರಡು ಪ್ರೆಂಚ್ ಸಂಸ್ಕೃತಿ ಹಾಗೂ ಸಂಪ್ರದಾಯದ ಬಹಳ ಪ್ರಭಾವಕ್ಕೆ ಒಳಗಾಗಿ ಇಂದಿಗೂ ಆ ಪ್ರಭಾವವನ್ನು ತನ್ನಲ್ಲಿ ಉಳಿಸಿಕೊಂಡಿದೆ.
ಬಂಗಾಳ ಕೊಲ್ಲಿಯ ಕೋರಮಂಡಲ ತೀರದಲ್ಲಿ ಇರುವ ಪಾಂಡಿಚೆರಿ ಚೆನ್ನೈಯಿಂದ 162 ಕಿ.ಮೀ ದೂರದಲ್ಲಿದೆ. ಇದು ಮೊದಲು ಪ್ರೆಂಚರ ಅಧೀನದಲ್ಲಿತ್ತು. 1670 ರಿಂದ 1954 ರ ತನಕ್ ಪ್ರೆಂಚ್ ಆಡಳಿತಕ್ಕೆ ಒಳಪಟ್ಟಿತ್ತು. ಇಲ್ಲಿ ಫ್ರೆಂಚರು ಸುಮಾರು ಮೂರು ಶತಮಾನಗಳ ಕಾಲ ಆಡಳಿತ ನಡೆಸಿ ತಮ್ಮ ಸಂಸ್ಕೃತಿಯ ಗುರುತನ್ನು ಬಿಟ್ಟು ಹೋಗಿದ್ದಾರೆ.
ತನ್ನ ವಿಶಿಷ್ಠ ವಾಸ್ತುಶಿಲ್ಪಕ್ಕೆ ಪಾಂಡಿಚೇರಿ ಖ್ಯಾತಿ..!
ಪಾಂಡಿಚೆರಿ ವಿಶಿಷ್ಟ ವಾಸ್ತುಶಿಲ್ಪ ಮತ್ತು ಸಮುದ್ರ ಕಿನಾರೆಗಳನ್ನು ಹೊಂದಿರುವ ನಗರವಾಗಿದೆ. ಇಲ್ಲಿ ನಡೆಯುತ್ತಾ ಆನಂದಿಸುವುದೆ ಒಂದು ವಿಶೇಷ ಅನುಭವವಾಗಿದೆ. ಇಲ್ಲಿ ಫ್ರೆಂಚ ವಾಸ್ತುಶಿಲ್ಪದ ದಟ್ಟ ಪ್ರಭಾವವನ್ನು ನಾವು ಕಾಣಬಹುದಾಗಿದೆ. ಇಲ್ಲಿ ಹಲವಾರು ರಸ್ತೆಗಳು ಫ್ರೆಂಚ್ ಹೆಸರುಗಳನ್ನು ಹೊಂದಿವೆ.
ಇದು ಎರಡು ಭಾಗಗಳಾಗಿ ವಿಂಗಡನೆ ಗೊಂಡಿದೆ. ಅವುಗಳೆಂದರೆ ಫ್ರೆಂಚ್ ಭಾಗ ಮತ್ತು ಭಾರತೀಯ ಭಾಗ ಇವುಗಳಲ್ಲಿ ಮೊದಲನೆಯ ಭಾಗದಲ್ಲಿ ವಸಾಹತು ಕಾಲದ ಕಟ್ಟಗಳನ್ನು ಕಾಣಬಹುದು ಹಾಗೂ ನಂತರ ಹೆಸರಿಸಿದ ಭಾಗದಲ್ಲಿ ತಮಿಳು ಶೈಲಿಯ ಕಟ್ಟಡಗಳನ್ನು ಕಾಣಬಹುದು. ಈ ಎರಡೂ ಶೈಲಿಗಳ ಸಮ್ಮಿಲನ ಈ ನಗರಕ್ಕೆ ಒಂದು ವಿಶೇಷವಾದ ಗತ್ತನ್ನು ನೀಡಿದೆ.
ಅಲ್ಲದೇ ಪಾಂಡಿಚೇರಿ ಶಾಪಿಂಗ್ ಪ್ರಿಯರ ಸ್ವರ್ಗ. ಇಲ್ಲಿ ಕೈಮಗ್ಗ, ವಿವಿಧ ತರಹದ ಕಲ್ಲುಗಳು, ಮರದ ಕೆತ್ತನೆಗಳು, ಮಣ್ಣಿನ ಪಾತ್ರೆಗಳು, ಸುಗಂಧ ದ್ರವ್ಯಗಳು, ಕನ್ನಡಿಯ ವಿವಿಧ ಶೈಲಿಗಳು, ಕ್ಯಾಂಡಲ್ ಗಳು, ಲ್ಯಾಂಪ್ ಗಳು ಹೀಗೆ ಹಲವಾರು ರೀತಿಯ ಶಾಪಿಂಗ್ ವಸ್ತುಗಳಿವೆ. ಡಿಸೆಂಬರ್ ಅಂತಾರಾಷ್ಟ್ರೀಯ ಯೋಗ ಉತ್ಸವ ಹಾಗೂ ಆಗಸ್ಟ್ ತಿಂಗಳಿನಲ್ಲಿ ನಡೆಯುವ ಆಹಾರ ಉತ್ಸವ ಹಾಗೂ ಜನವರಿ ತಿಂಗಳಿನಲ್ಲಿ ನಡೆಯುವ ಖರೀದಿ ಉತ್ಸವ ಇಲ್ಲಿನ ಕೆಲವು ಪ್ರಮುಖ ಆಕರ್ಷಣೆಗಳು.
ಇಲ್ಲಿ ಪ್ರೊಮೆಂಡೇಡ್, ಪಾರಾಡೈಸ್ ಸೆರೆನಿಟಿ ಹಾಗೂ ಔರೊವಿಲ್ಲೆಯಂತಹ ಜಗತ್ಪ್ರಸಿದ್ಧ ಕಡಲ ಕಿನಾರೆಗಳನ್ನು ಕಾಣಬಹುದು. ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಶ್ರೀ ಅರಬಿಂದೋ ಆಶ್ರಮ. ಈ ಆಶ್ರಮಕ್ಕೆ ದೇಶ ವಿದೇಶಗಳಿಂದ ಜನರು ಆಗಮಿಸುತ್ತಾರೆ. ಇನ್ನು ಪಾಂಡಿಚೇರಿ ಸಿನಿಮಾ ಮಂದಿಯ ಹಾಟ್ ಫೇವ್ರೇಟ್ ಸ್ಥಳ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದ ಅನೇಕ ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿವೆ.
ಇಲ್ಲಿ ತಂಗಲು ಹಲವು ರೆಸಾರ್ಟ್ ಮತ್ತು ಹಾಸ್ಟೆಲ್ ಗಳು ಲಭ್ಯವಿವೆ. ಪಾಂಡಿಚೇರಿ ಯಲ್ಲಿ ಸಂಚರಿಸಲು ಟ್ಯಾಕ್ಸಿ ಮತ್ತು ಬೈಕ್ ಗಳು ಬಾಡಿಗೆಗೆ ಲಭ್ಯವಿವೆ. ನವೆಂಬರ್ ನಿಂದ ಫೆಬ್ರವರಿ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಇನ್ನು ಸೀ ಫುಡ್ ಪ್ರಿಯರಿಗೆ ಇಲ್ಲಿ ಸಾಕಷ್ಟು ಆಯ್ಕೆಗಳಿವೆ. ಶಾಂತ ಪರಿಸರ, ವಿಭಿನ್ನ ವಾಸ್ತುಶಿಲ್ಪ, ಸುಂದರ ಕಡಲಕಿನಾರೆಗಳಲ್ಲಿ ಎಂಜಾಯ್ ಮಾಡಬಯಸುವವರು ಇಲ್ಲಿಗೆ ಭೇಟಿ ನೀಡಿ.