Ponniyin Selvan : ಪ್ರತಿಕಾರಕ್ಕೆ ಸುಂದರ ರೂಪ.. ಐಶ್ ಪೋಸ್ಟರ್ ರಿಲೀಸ್
ಖ್ಯಾತ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ಪೊನ್ನಿಯನ್ ಸೆಲ್ವನ್ ಪಾರ್ಟ್ – 1.
ಮದ್ರಾಸ್ ಟಾಕಿಸ್ ಜೊತೆಗೆ ಲೈಕಾ ಪ್ರೊಡಕ್ಷನ್ ಭಾರಿ ಬಜೆಟ್ ನಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದೆ.
ಈ ಸಿನಿಮಾದಲ್ಲಿ ವಿಕ್ರಮ್, ಜಯಂ ರವಿ, ಕಾರ್ತಿ, ಐಶ್ವರ್ಯ ರಾಯ್, ತ್ರಿಷಾ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
1955 ರಲ್ಲಿ ಕಲ್ಕಿ ಕೃಷ್ಣಮೂರ್ತಿ ರಚಿಸಿದ ಕಾದಂಬರಿ ಆಧಾರವಾಗಿ ಈ ಮ್ಯೂವಿ ಸೆಟ್ಟೇರಿದೆ.

ಭಾರಿ ತಾರಾಗಣದ ಈ ಸಿನಿಮಾ ಸೆಪ್ಟಂಬರ್ 30 ರಂದು ರಿಲೀಸ್ ಆಗಲಿದೆ.
ಹೀಗಾಗಿ ಸಿನಿಮಾದ ಪ್ರಮೋಷನ್ ಕೂಡ ಆರಂಭವಾಗಿದ್ದು, ನಟಿನಟರ ಫಸ್ಟ್ ಲುಕ್ ಪೋಸ್ಟರ್ ಗಳನ್ನು ರಿಲೀಸ್ ಮಾಡುತ್ತಿದೆ ಚಿತ್ರತಂಡ.
ಈಗಾಗಲೇ ರಿಲೀಸ್ ಅಗಿರುವ ವಿಕ್ರಮ್, ಕಾರ್ತಿ ಪೋಸ್ಟರ್ ಗಳು ಸಿನಿಮಾ ಪ್ರಿಯರಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಿವೆ.
ಇದೀಗ ಐಶ್ವರ್ಯ ರಾಯ್ ಫಸ್ಟ್ ಲುಕ್ ಬುಧವಾರ ರಿಲೀಸ್ ಆಗಿದೆ.
ಪ್ರತಿಕಾರಕ್ಕೆ ಸುಂದರ ರೂಪ.. ನಂದಿನಿ ಪಳವೂರು ರಾಣಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯ ರಾಯ್ ಕ್ಯಾರಕ್ಟರ್ ಪೊಸ್ಟರ್ ರಿಲೀಸ್ ಅಗಿದೆ.