Ponniyin Selvan | ಮಣಿರತ್ನಂಗಾಗಿ ಅಖಾಡಕ್ಕೆ ಕಮಲ್
ಖ್ಯಾತ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ಪೊನ್ನಿಯನ್ ಸೆಲ್ವನ್ ಪಾರ್ಟ್ – 1.
ಮದ್ರಾಸ್ ಟಾಕಿಸ್ ಜೊತೆಗೆ ಲೈಕಾ ಪ್ರೊಡಕ್ಷನ್ ಭಾರಿ ಬಜೆಟ್ ನಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದೆ.
ಈ ಸಿನಿಮಾದಲ್ಲಿ ವಿಕ್ರಮ್, ಜಯಂ ರವಿ, ಕಾರ್ತಿ, ಐಶ್ವರ್ಯ ರಾಯ್, ತ್ರಿಷಾ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
1955 ರಲ್ಲಿ ಕಲ್ಕಿ ಕೃಷ್ಣಮೂರ್ತಿ ರಚಿಸಿದ ಕಾದಂಬರಿ ಆಧಾರವಾಗಿ ಈ ಮ್ಯೂವಿ ಸೆಟ್ಟೇರಿದೆ.
ಭಾರಿ ತಾರಾಗಣದ ಈ ಸಿನಿಮಾ ಸೆಪ್ಟಂಬರ್ 30 ರಂದು ರಿಲೀಸ್ ಆಗಲಿದೆ.
ಹೀಗಾಗಿ ಸಿನಿಮಾದ ಪ್ರಮೋಷನ್ ಕೂಡ ಆರಂಭವಾಗಿದ್ದು, ನಟಿನಟರ ಫಸ್ಟ್ ಲುಕ್ ಪೋಸ್ಟರ್ ಗಳನ್ನು ರಿಲೀಸ್ ಮಾಡುತ್ತಿದೆ ಚಿತ್ರತಂಡ.

ಇದರ ನಡುವೆ ಮತ್ತೊಂದು ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ.
ಅದು ಏನಂದರೇ ಈ ಸಿನಿಮಾಗಾಗಿ ನಟ ಕಮಲ್ ಹಾಸನ್ ಕೆಲಸ ಮಾಡಲಿದ್ದಾರಂತೆ.
ಈ ಸಿನಿಮಾದಲ್ಲಿ ಪಾತ್ರಗಳಿಗೆ ಸಂಬಂಧಿಸಿದಂತೆ ಕೆಲವು ಸನ್ನಿವೇಶಗಳನ್ನು ಅಲ್ಲಲ್ಲಿ ಸೇರಿಸುತ್ತಾ ವಾಯಸ್ ಓವರ್ ಇರುತ್ತಂತೆ.
ಈ ಸ್ಪೆಷನ್ ಸಿನ್ಸ್ ಗಳಲ್ಲಿ ಕಮಲ್ ಹಾಸನ್ ವಾಯ್ಸ್ ನೀಡಲಿದ್ದಾರಂತೆ.
ಈ ಬಗ್ಗೆ ಮಣಿರತ್ನಂ ಕಮಲ್ ಹಾಸನ್ ಅವರೊಂದಿಗೆ ಮಾತನಾಡಿದ್ದು, ಇದಕ್ಕೆ ಹಾಸನ್ ಓಕೆ ಎಂದಿದ್ದಾರಂತೆ.
ಜೊತೆಗೆ ಆಯಾ ಭಾಷೆಗಳಲ್ಲಿ ಸ್ಟಾರ್ ನಟ ಕೈಯಲ್ಲಿ ವಾಯ್ಸ್ ಓವರ್ ಕೊಡಿಸಲಿದ್ದಾರಂತೆ ಮಣರತ್ನಂ.