Ponniyin Selvan | ಚೋಳರು ಬರುತ್ತಿದ್ದಾರೆ… ಪೋಸ್ಟರ್ ರಿಲೀಸ್
ನಿರ್ದೇಶಕ ಮಣಿರತ್ನಂ ಸಿನಿಮಾ ಅಂದ್ರೆ ಸಿನಿಮಾ ಪ್ರಿಯರಲ್ಲಿ ಒಂದು ರೇಂಜಿನ ಕ್ರೇಜ್ ಇರುತ್ತದೆ.
ಸಿನಿಮಾ ಲವರ್ಸ್ ಗೆ ಇಷ್ಟವಾಗವ ರೀತಿಯಲ್ಲಿಯೇ ಮಣಿರತ್ನಂ ಅವರು ಸಿನಿಮಾಗಳನ್ನು ತೆರೆ ಮೇಲೆ ತರುತ್ತಾರೆ.
ಪ್ರಸ್ತುತ ಮಣಿರತ್ನಂ ಅವರು ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ.
ವಿಕ್ರಂ, ಕಾರ್ತಿಕ್,ಜಯಂ ರವಿ, ಐಶ್ವರ್ಯ ರಾಯ್, ತ್ರಿಷ, ಬಾಬಿ ಸಿಂಹ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿರುವ ಈ ಸಿನಿಮಾ ಎರಡು ಭಾಗಗಳಾಗಿ ರಿಲೀಸ್ ಆಗಲಿದೆ.

ಇದೀಗ ಶನಿವಾರ ಈ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.
ಚೋಳರು ಬರುತ್ತಿದ್ದಾರೆ ಅಂತಾ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ.
ಲೈಕಾ ಪ್ರೋಡಕ್ಷನ್ ಸಂಸ್ಥೆ ಮದ್ರಾಸ್ ಟಾಕೀಸ್ ಬ್ಯಾನರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ.
ಸೆಪ್ಟಂಬರ್ 30 ರಂದು ಈ ಸಿನಿಮಾ ರಿಲೀಸ್ ಆಗಲಿದೆ.
ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಭಾಷೆಯಲ್ಲಿ ಈ ಚಿತ್ರ ತೆರೆಕಾಣಲಿದೆ.