Pooja Hegde : ಐಟಂ ಹಾಡಿಗೆ ಹೆಜ್ಜೆ ಹಾಕಲಿಕ್ಕೆ 1 ಕೋಟಿ ರೂ..
ಕನ್ನಡದ ಹುಡುಗಿ ಪೂಜಾ ಹೆಗ್ಡೆ ಟಾಲಿವುಡ್ , ಕಾಲಿವುಡ್ ನಲ್ಲಿ ಸ್ಟಾರ್ ನಟಿ… ಬಹುಬೇಡಿಕಯ ನಟಿ.. ಅತಿ ಹೆಚ್ಚು ಸಂಭಾವವನೆ ಪಡೆಯುವ ನಟಿಯರ ಪೈಕಿ ಒಬ್ಬರು.. ಅಷ್ಟೇ ಅಲ್ಲ ಪೂಜಾ ಹೆಗ್ಡೆ ವಿಶೇಷ ಹಾಡುಗಳಿಗೂ ಹೆಜ್ಜೆ ಹಾಕಿದ್ದಾರೆ.. ರಂಗಸ್ಥಳಂನಲ್ಲಿ ಜಿಗೇಲು ರಾಣಿ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದರು..
ಪ್ರಸ್ತುತ ಅವರ ಬೀಸ್ಟ್ ಸಿನಿಮಾ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಗಳಿಸುತ್ತಿದೆ.. ಮತ್ತೊಂದೆಡೆ ಈ ಹಿಂದೆ ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ತು.. ಸದ್ಯ ಪೂಜಾ ಅಭಿನಯದ ಆಚಾರ್ಯ ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ..
ಇನ್ನೂ ಕೆಲ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಿರುವ ಪೂಜಾ,,, ಮತ್ತೊಂದು ಐಟಂ ಸಾಂಗ್ ಗೆ ಸೊಂಟ ಬಳುಕಿಸಿದ್ದಾರೆ.. ಅಂದ್ಹಾಗೆ ಈ ಐಟಂ ಹಾಡಿಗೆ ಹೆಜ್ಜೆ ಹಾಕಲು ಪೂಜಾ 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ..
‘ಎಫ್ 3’ ಹೆಸರಿನ ಸಿನಿಮಾವೊಂದರಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿನ್ನೆಯಷ್ಟೇ ಆ ಸಿನಿಮಾದ ಹಾಡಿನ ಚಿತ್ರೀಕರಣ ನಡೆದಿದೆ.
ಈ ಹಾಡಿನಲ್ಲಿ ಪೂಜಾ ಫಂಕಿ , ಹಾಟ್ ಅಂಡ್ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ..
ಪಿಂಕ್ ಬಣ್ಣದ ಶಾರ್ಟ್ ಡ್ರೆಸ್ ನಲ್ಲಿ ಸ್ಟೆಪ್ ಹಾಕಿದ್ದು , ಇದೊಂದು ಪಾರ್ಟಿ ಸಾಂಗ್ ಆಗಿದ್ದು, ಪೂಜಾ ಸ್ಟಿಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು , ಪಡ್ಡೆಗಳ ನಿದ್ದೆಗೆಡಿಸುವಂತೆ ಹಾಡು ಇರಲಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗ್ತಿದೆ..