ಚಾಮರಾಜನಗರ : ಗ್ರೀನ್ ಜೋನ್ ಜಿಲ್ಲೆಯಲ್ಲಿ ಮೇ 4 ರಿಂದ ಮದ್ಯದಂಗಡಿ ತೆಗೆಯಲು ಸರ್ಕಾರ ಮುಂದಾಗಿರುವುದರಿಂದ ನಗರದ ವ್ಯಕ್ತಿವೋರ್ವ ಮದ್ಯದಂಗಡಿಗೆ ಪೂಜೆ ಸಲ್ಲಿಸಿ ಸರ್ಕಾರದ ನಿಲುವು ಬದಲಾಗದಿರಲಿ, ಮಂಗಳವಾರದಿಂದಲಾದರೂ ಎಣ್ಣೆ ಸಿಗಲೆಂದು ಕೋರಿಕೊಂಡಿದ್ದಾನೆ.
ನಗರದ ಮಹಾದೇವಪ್ರಸಾದ್ ಎಂಬ ಯುವಕ ಇಂದು ಎಂಎಸ್ ಐಎಲ್ ಶಾಪಿನ ಬಾಗಿಲಿಗೆ ಅರಿಶಿಣ-ಕುಂಕುಮದ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ಎಣ್ಣೆ ಅಂಗಡಿ ತೆಗೆದು ಸಂತೋಷ,ಸಂಭ್ರಮ ಕರುಣಿಸಪ್ಪ ಎಂದು ಬೇಡಿಕೊಳ್ಳುವ ತನ್ನ ಗುಂಡುಪ್ರೇಮವನ್ನು ಪ್ರದರ್ಶಿಸಿದ್ದಾನೆ.
ಮದ್ಯದಂಗಡಿ ಬಾಗಿಲು ತೆರೆದು 30-40 ದಿನಗಳಾಗುತ್ತ ಬರುತ್ತಿದ್ದು ಅಂಗಡಿಗಳು ತೆರೆಯುತ್ತದೆ ತೆರೆಯುತ್ತದೆ ಎಂದು ಆಸೆಯಷ್ಟೇ ತೋರಿರುವುದರಿಂದ ಈ ಬಾರಿಯಾದರೂ ಅಂಗಡಿ ತೆಗೆಯಲೆಂದು ಕೋರಿಕೊಂಡು ಗಮನ ಸೆಳೆದಿದ್ದಾನೆ.