ಬಲವಂತವಾಗಿ ನನ್ನ ಗರ್ಭಿಣಿ ಮಾಡಬೇಡಿ – ಪೂನಂ ಪಾಂಡೆ..!
ವಿವಾದ ಅಂದ್ರೆ ಪೂನಂ… ಪೂನಂ ಅಂದ್ರೆ ವಿವಾದ… ಸದಾ ಕಾಂಟ್ರವರ್ಸಿವಳಿಂದಲೇ ಸುದ್ದಿಯಲ್ಲಿರೋದು ಅಂದ್ರೆ ಪೂನಂಗೆ ಭಾರೀ ಇಷ್ಟ ಅನ್ಸುತ್ತೆ.. ಅದಿಕ್ಕೆ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನ ನೀಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಲೈಮ್ ಲೈಟ್ ನಲ್ಲಿ ಇರುತ್ತಾರೆ..
ಕಾಂಟ್ರವರ್ಸಿ ಹೇಳಿಕೆ ನೀಡೋ ಜೊತೆಗೆ ಅವರು ಮಾಡೋ ಕೆಲಸಗಳು ಕಾಂಟ್ರವರ್ಸಿಯಲ್ ಆಗಿನೇ ಇರುತ್ತೆ. ತನ್ನ ಪತಿ ಸ್ಯಾಮ್ ವಿರುದ್ಧ ಮದುವೆಯಾಗಿ ಒಂದೇ ವಾರಕ್ಕೆ ದೂರು ನೀಡಿ ಪೊಲೀಸ್ ಠಾಣೆಗೆ ಹಾಕಿಸಿದ್ದ ಪೂನಂ ಮದುವೆ ರಂಪಾಟ ಬೀದಿಗೆ ತಂದಿದ್ದರು.. ಕಳೆದ ವರ್ಷ ಗೋವಾ ಬೀಚ್ನಲ್ಲಿ ಪೂನಂ ಪಾಂಡೆ ಮಾಡಿದ್ದ ಅರೆ ಬೆತ್ತಲೆ ವಿಡಿಯೋ ಸಹ ಭಾರಿ ಸುದ್ದಿಯಾಗಿತ್ತು. ಗೋವಾ ಅಸೆಂಬ್ಲಿಯಲ್ಲಿ ಸಹ ಈ ಬಗ್ಗೆ ಚರ್ಚೆಯಾಗಿ ಕೊನೆಗೆ ಪೂನಂ ಅನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
ಭಾರತ, ನ್ಯೂಜಿಲೆಂಡ್ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಪೂನಂ ಭಾರತ ಗೆದ್ದರೆ ಮತ್ತೆ ಬೆತ್ತಲಾಗುತ್ತೇನೆ ಎಂದು ಹೇಳಬೇಕಾ ಎಂದಿದ್ದರು. ಹೀಗೆ ಸದಾ ಬೋಲ್ಡ್ ಹೇಳಿಕೆಗಳನ್ನೇ ನೀಡುವ ಪೂನಂ ಕಳೆದ ವರ್ಷ ನವೆಂಬರ್ನಲ್ಲಿ ಮದುವೆಯಾಗಿದ್ದ ಸಂದರ್ಭದಲ್ಲಿ ಗರ್ಭಿಣಿ ಎಂಬ ಸುದ್ದಿಗಳು ಹರಿದಾಡಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೂನಂ, ‘ಬಲವಂತದಿಂದ ನನ್ನನ್ನು ಗರ್ಭಿಣಿ ಮಾಡಬೇಡಿ’ ಎಂದು ಹೇಳಿದ್ದಾರೆ.. ‘ಗರ್ಭಿಣಿ ಆಗುವುದು ಮಹಿಳೆಯರಿಗೆ ಶುಭ ಸುದ್ದಿ ಆದರೆ ನನಗೆ ಅದು ಕೆಟ್ಟ ಸುದ್ದಿ. ನಾನು ಗರ್ಭಿಣಿ ಅಲ್ಲ. ನನ್ನ ಜೀವನವೊಂದು ತೆರೆದ ಪುಸ್ತಕ. ಯಾವುದೇ ಸುದ್ದಿ ಹರಡಿಸುವ ಮುನ್ನ ನನ್ನನ್ನೇ ಒಮ್ಮೆ ಕೇಳಿಬಿಡಿ ನಾನೇ ಉತ್ತರ ನೀಡುತ್ತೇನೆ’ ಎಂದಿದ್ದಾರೆ.