ಅಶ್ಲೀಲ ವಿಡಿಯೋ ಪ್ರಕರಣ : ಪೂಣಂ ಪಾಂಡೆಗೆ ರಿಲೀಫ್..!!
ಬ್ಲೂಫಿಲಂ ಕೇಸ್ ನ ಪ್ರಮುಖ ಆರೋಪಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ.. ಆದ್ರೆ ಇದೇ ಕೇಸ್ ನಲ್ಲೇ ಇತರರ ವಿರುದ್ಧವೂ ಪ್ರಕರಣ ದಾಖಲಾಗಿ ಬಂಧನದ ಭೀತಿ ಎದುರಾಗಿತ್ತು.. ಹಾಗೆಯೇ ವಿವಾದಾತ್ಮಕ ನಟಿ ಪೂನಂ ಪಾಂಡೆಗೂ ಬಂಧನದ ಭೀತಿ ಎದುರಾಗಿತ್ತು..
ನಿರೀಕ್ಷಣಾ ಜಾಮೀನಿಗಾಗಿ ಪೂನಂ ಪಾಂಡೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದ್ದು ಪೂನಂಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.. ಈ ಮೂಲಕ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.. ಈ ಮೊದಲು ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ನಿರೀಕ್ಷಣಾ ಜಾಮೀನು ನೀಡುವಂತೆ ಪೂನಂ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿಯನ್ನು ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು ಪೂನಂ ಪಾಂಡೆ. ಆದರೆ ಅಲ್ಲಿ ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ಅಶ್ಲೀಲ ವಿಡಿಯೋ ಮಾರಾಟ ಮತ್ತು ಪ್ರಸಾರ ಪ್ರಕರಣದಲ್ಲಿ ನಾನು ಸಂತ್ರಸ್ತೆ ಆರೋಪಿಯಲ್ಲ. ನನ್ನ ಅಶ್ಲೀಲ ವಿಡಿಯೋಗಳಿದ್ದ ವೆಬ್ ಸೈಟ್ ಅನ್ನು ಕೇಂದ್ರ ಸರ್ಕಾರವು 2015 ರಲ್ಲಿಯೇ ಮುಟ್ಟುಗೋಲು ಹಾಕಿಕೊಂಡು ಬಂದ್ ಮಾಡಿದೆ ಎಂದು ಪೂನಂ ಪಾಂಡೆ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಅಂದ್ಹಾಗೆ ರಾಜ್ ಕುಂದ್ರಾ ಬಂಧನದ ನಂತರ ಸಸಿಕ್ಕಾಪಟ್ಟೆ ಚರ್ಚೆಗೆ ಬಂದಿದ್ದವರು ಶರ್ಲಿನ್ ಚೋಪ್ರಾ , ಪೂನಂ ಪಾಂಡೆ.. ರಾಜ್ ಕುಂದ್ರಾ ವಿರುದ್ಧ ಸಾಕಷ್ಟು ಆರೋಪಗಳನ್ನಹೊರಸಿದ್ದರು.. ಆದ್ರೆ ರಾಜ್ ಕುಂದ್ರಾ ಜಾಮೀನಿನ ಮೇಲೆ ಬಂದ ಬಳಿಕ , ರಾಜ್ ಕುಂದ್ರಾ ಈ ಇಬ್ಬರ ವಿರುದ್ಧ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.. ಶರ್ಲಿನ್ , ಪೂನಂ ತಮ್ಮ ಸ್ವ ಇಚ್ಛೆಯಿಂದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಅವರ ಅಶ್ಲೀಲ ವಿಡಿಯೋಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದರು. ರಾಜ್ ಕುಂದ್ರಾ ಅರ್ಜಿಯಲ್ಲಿ ಈ ಅಂಶ ಉಲ್ಲೇಖಿಸಿದ ಬಳಿಕ ಪೂನಂ ಪಾಂಡೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು.
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಿರ್ಮಾಪಕ ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು ಕಳೆದ ವರ್ಷ ಜುಲೈ 19 ರಂದು ಬಂಧಿಸಿದ್ದರು. 62 ದಿನಗಳ ಕಾಲ ಮುಂಬೈ ಜೈಲಿನಲ್ಲಿದ್ದ ರಾಜ್ ಕುಂದ್ರಾ ಬಳಿಕ ಸೆಪ್ಟೆಂಬರ್ 20ರಂದು ಜೈಲಿನಿಂದ ಜಾಮೀನಿನ ಮೇಲೆ ರಿಲೀಸ್ ಆಗಿದ್ದಾರೆ.. ಆದ್ರೆ ಆಗೊಮ್ಮೆ ಈಗೊಮ್ಮೆ ಹೊರಗೆ ಕಾಣಿಸಿಕೊಂಡಿರುವುದು ಬಿಟ್ಟರೆ , ಹೆಚ್ಚಾಗಿ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ..