ಕಾಂಟ್ರವರ್ಸಿ ನಟಿ ಪೂನಂ ಪಾಂಡೆ ಗೋವಾದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.. ಪೂನಂ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂದ್ಹಾಗೆ ಪೂನಂ ಬೆತ್ತಲೆ ಫೋಟೋ ಶೂಟ್ ಮಾಡಿಸಿರೋದು ಇತ್ತೀಚೆಗಲ್ಲ ಎರಡು ವರ್ಷಗಳ ಹಿಂದೆ..
ಹೌದು…!! 2 ವರ್ಷಗಳ ಹಿಂದೆ ಬೆತ್ತಲೆಯಾಗಿ ಫೋಟೋಗೆ ಫೋಸ್ ಕೊಟ್ಟಿದ್ದರು.. ಇದೀಗ ಗೋವಾ ಪೊಲೀಸರು ಈ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಕೇಸ್ ನಲ್ಲಿ ಅನೇಕ ವ್ಯಕ್ತಿಗಳಿಂದ ಹೇಳಿಕೆಗಳನ್ನು ಪಡೆದು ಕೇಸ್ ದಾಖಲು ಮಾಡಿಕೊಳ್ಳಲಾಗಿತ್ತು.
ಈ ಹಿಂದೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂನಂ ಮತ್ತು ಅವರ ಪತಿ ಸ್ಯಾಮ್ ಅವರನ್ನು ಗೋವಾ ಪೊಲೀಸರಯ ಬಂಧಿಸಿ, ಬಿಡುಗಡೆ ಮಾಡಿದ್ದರು.
2020ರಲ್ಲಿ ಪೂನಂ ಪಾಂಡೆ ಮತ್ತು ಪತಿ ಸ್ಯಾಮ್ ಬಾಂಬೆ ಇಬ್ಬರೂ ಚಾಲೋಲಿ ಡ್ಯಾಮ್ ಗೆ ಹೋಗಿದ್ದರು. ಅಲ್ಲಿ ಎಲ್ಲರೆದುರೇ ಬೆತ್ತಲೆ ಫೋಟೋ ಶೂಟ್ ಮಾಡಿದ್ದರು. ಅದನ್ನು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲವಾಗಿ ನಡೆದುಕೊಂಡಿದ್ದ ಪರಿಣಾಮ ದೂರು ದಾಖಲಾಗಿತ್ತು..