ಪ್ರಧಾನಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಪೂನವಾಲಾ
ಹೊಸದಿಲ್ಲಿ, ಸೆಪ್ಟೆಂಬರ್28: ಜಾಗತಿಕ ಸಮುದಾಯಕ್ಕೆ ಲಸಿಕೆಗಳನ್ನು ನೀಡುವ ಬಗ್ಗೆಗಿನ ನರೇಂದ್ರ ಮೋದಿ ಜಿಯವರ ನಿರ್ಧಾರಕ್ಕೆ ಅವರನ್ನು ನಾವು ಶ್ಲಾಘಿಸುತ್ತೇವೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲಾ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಬಳಿ ಲಸಿಕೆ ಖರೀದಿಸಲು ಮತ್ತು ವಿತರಿಸಲು 80,000 ಕೋಟಿ ರೂಪಾಯಿಗಳು ಲಭ್ಯವಿದೆಯೇ ಎಂದು ಕೇಳಿದ ಮರುದಿನ, ಆದರ್ ಪೂನವಾಲಾ ಅವರು ಟ್ವಿಟರ್ ಮಾಡಿ ಪ್ರಧಾನಿ ಮೋದಿಯವರ ನಾಯಕತ್ವವನ್ನು ಹೊಗಳಿದ್ದಾರೆ.
ಜಾಗತಿಕ ಸಮುದಾಯಕ್ಕೆ ಲಸಿಕೆಗಳನ್ನು ನೀಡುವ ಬಗ್ಗೆ ನರೇಂದ್ರಮೋದಿ ಜಿ ಅವರ ನಿರ್ಧಾರವನ್ನು ನಾವು ಹಂಚಿಕೊಳ್ಳಲು ಬಯಸುತ್ತೇವೆ ಮತ್ತು ಶ್ಲಾಘಿಸುತ್ತೇವೆ. ಇದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ. ನಿಮ್ಮ ನಾಯಕತ್ವ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಭಾರತಕ್ಕಾಗಿ ನಿಮ್ಮ ಎಲ್ಲಾ ವ್ಯವಸ್ಥೆಗಳು ಭಾರತೀಯ ಜನರ ಎಲ್ಲಾ ಅಗತ್ಯಗಳನ್ನು ನೋಡಿಕೊಳ್ಳುತ್ತವೆ ಎಂಬುದು ಸ್ಪಷ್ಟವಾಗಿದೆ ಎಂದು ಆದರ್ ಪೂನವಾಲ್ಲಾ ಟ್ವೀಟ್ ಮಾಡಿದ್ದಾರೆ.
https://twitter.com/adarpoonawalla/status/1310097963989913600?s=19
ಈ ಹಿಂದೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನವಾಲಾ ಇನ್ನೊಂದು ವರ್ಷದಲ್ಲೇನಾದರೂ ಕೊರೋನಾ ಲಸಿಕೆ ಸಿದ್ಧಗೊಂಡರೆ, ಅದು ಪ್ರತಿಯೊಬ್ಬರಿಗೂ ತಲುಪಲು ಕೇಂದ್ರದ ಬಳಿ 80 ಸಾವಿರ ಕೋಟಿ ರೂಪಾಯಿಗಳು ಸಿದ್ಧವಿದೆಯೆ ಎಂದು ಪ್ರಶ್ನಿಸಿದ್ದರು. ಜೊತೆಗೆ ಆ ಟ್ವೀಟ್ ಅನ್ನು ಪ್ರಧಾನಿ ಮೋದಿಯವರ ಕಚೇರಿಗೆ ಟ್ಯಾಗ್ ಮಾಡಿದ್ದರು








