ಸ್ಯಾಂಡಲ್ ನ ‘ನಟಸಾರ್ವಭೌಮ’, ‘ಯುವರತ್ನ’ನಿಗೆ ಬರ್ತ್ ಡೇ ಸಂಭ್ರಮ..!
ಅಭಿಮಾನಿಗಳ ಹೃದಯದ ‘ರಾಜಕುಮಾರ’ ಸ್ಯಾಂಡಲ್ ವುಡ್ ನ ‘ಯುವರತ್ನ’ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಇಂದು 47ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮಾಸ್, ಕ್ಲಾಸ್, ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಯಾವುದೇ ಕ್ಯಾರೆಕ್ಟರ್ ನಲ್ಲೂ ‘ನಟಸಾರ್ವಭೌಮ’ ನಾಗಿರುವ ‘ದೊಡ್ಮನೆ ಹುಡುಗನಿಗೆ’ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಡ್ಯಾನ್ಸ್ ನಲ್ಲಿ ಅವರ ಸ್ಟೈಲ್, ಎನರ್ಜಿ ಸ್ಟೆಪ್ಸ್ ಗೆ ಫಿದಾ ಆಗದೋರು ಇಲ್ಲ. ಡೈಲಾಗ್ ನಲ್ಲಿ ಪುನೀತ್ ದೇ ಯುನೀಕ್ ಸ್ಟೈಲ್ , ಮಾಸ್ ಲುಕ್ ನಲ್ಲಿ ಡೇರಿಂಗ್ , ಡ್ಯಾಶಿಂಗ್ ಆಗಿ ಕಾಣಿಸುತ್ತಾರೆ. ಕ್ಲಾಸ್ ಲುಕ್ ನಲ್ಲಿ ಎಂಥವರ ಮನಸನ್ನೂ ಗೆಲ್ತಾರೆ. ಪವರ್ , ಆಕ್ಷನ್ ವಿಚಾರಕ್ಕೆ ಬಂದ್ರೆ ಅಪ್ಪುಗೆ ಅಪ್ಪುನೆ ಸಾಟಿ.. ಅದಕ್ಕೆ ಅವರನ್ನ ಪವರ್ ಸ್ಟಾರ್ ಎನ್ನೋದು.
‘ಮುಂದುವರೆದ ಅಧ್ಯಾಯ’ದಲ್ಲಿ ಆದಿತ್ಯನ ಆರ್ಭಟ..!
ಅಪ್ಪು ಗೆ ಇರುವ ಫ್ಯಾನ್ ರೇಂಜ್ ತುಂಬಾನೆ ಡಿಫರೆಂಟ್. ಇಂತಹದ್ದೇ ಕ್ಯಾಟೆಗರಿ ಅಂತ ಇಲ್ಲ. ಚಿಕ್ಕ ಮಕ್ಕಳು ಅಪ್ಪು ಅಪ್ಪು ಅಂತ ಅಪ್ಪು ಡ್ಯಾನ್ಸ್ ಗೆ ಸ್ಟೆಪ್ಸ್ ಹಾಕ್ತಾರೆ. ಯುವಕರು ಅಪ್ಪು ಪವರ್ ಗೆ ಸುಸ್ತಾಗ್ತಾರೆ. ವಯಸ್ಕರು ಎಮೋಷನಲ್ ಆಗಿ ಕನೆಕ್ಟ್ ಆದ್ರೆ ಹಿರಿಯರು ಅಪ್ಪುವನ್ನ ಕನ್ನಡದ ಪ್ರೀತಿಯ ಪುತ್ರನ ತರ ನೋಡ್ತಾರೆ. ಮಾಸ್ ಅಭಿಮಾನಿಗಳಿಗೆ ಅಪ್ಪು ಸೂಪರ್ ಎನ್ನಿಸ್ತಾರೆ. ಕ್ಲಾಸ್ ಅಭಿಮಾನಿಗಳಿಗೆ ಅಪ್ಪು ಸ್ಟೈಲ್ , ಆ ಕ್ರೇಜ್ ಹುಚ್ಚು ಹಿಡಿಸುತ್ತೆ.
ಅಂದ್ಹಾಗೆ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಹುಟ್ಟುಹಬ್ಬದ ಜಾತ್ರೆ ಆರಂಭಿಸಿದ್ದಾರೆ. ಈ ವರ್ಷ ಕೊರೊನಾ ಕಾರಣ ಅಪ್ಪು ತುಂಬಾ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ತಿದ್ದಾರೆ. ಅಭಿಮಾನಿಗಳು ದಯಮಾಡಿ ಈ ಬಾರಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇಲ್ಲದೇ ಇದ್ದರೆ ಪ್ರತಿ ವರ್ಷದಂತೆ ಈ ಬಾರಿಯೂ ಪುನೀತ್ ರಾಜ್ ಕುಮಾರ್ ಮನೆ ಬಳಿ ಸಾವಿರಾರು ಅಭಿಮಾನಿಗಳು ಬಂದು ಅತ್ಯಂತ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡ್ತಿದ್ದರು.
ಅಪ್ಪು ಬರ್ತ್ ಡೇ ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಮನ್ ಡಿಪಿ ರಿಲೀಸ್ ಮಾಡಿ, ಅಪ್ಪುಗೆ ವಿಶ್ ಮಾಡುತ್ತಿದ್ದಾರೆ. ಅಲ್ದೇ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಪುನೀತ್ ರಾಜ್ ಕುಮಾರ್ ಅವರಿಗೆ ವಿಷ್ ಮಾಡ್ತಿದ್ದಾರೆ.