ಆಂಧ್ರ ಪ್ರದೇಶದಲ್ಲಿ ಪ್ರವಾಹ : 1 ಕೋಟಿ ರೂ. ದೇಣಿಗೆ ನೀಡಿದ ಪ್ರಭಾಸ್
ಹೈದರಾಬಾದ್ : ಆಂಧ್ರಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉoಟಾದ ಪ್ರವಾಹದಿಂದಾಗಿ ಸಾಕಷ್ಟು ತೊಂದರೆಯಾಗಿದೆ.. ಇದ್ರಿಂದಾಗಿ ಅನೇಕರು ನಷ್ಟ ಅನುಭವಿಸಿದ್ದಾರೆ.. ರೈತರು ಬೆಳೆ ನಾಶದಿಂದ ಕಂಗಾಲಾಗಿದ್ರೆ, ಅನೇಕರ ಆಸ್ತಿ ಪಾಸ್ತಿಗೆ ಹಾನಿಯಾಗಿದೆ..
ಹೀಗೆ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ತಾರೆಯರು ಸಹಾಯಾಸ್ತ ಚಾಚಿದ್ದಾರೆ.. ಇತ್ತೀಚೆಗೆ ಅಷ್ಟೇ ಚಿರಂಜೀವಿ (Chiranjeevi) ಹಾಗೂ ಪುತ್ರ ರಾಮ್ ಚರಣ್ (Ram Charan Teja ) ತಲಾ 25 ಲಕ್ಷ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ್ರು..
ಇದೀಗ ಬಾಹುಬಲಿ ಪ್ರಭಾಸ್ (Prabhas) ಬರೋಬ್ಬರಿ 1 ಕೋಟಿ ರೂಪಾಯಿಗಳ ದೇಣಿಗೆಯನ್ನ ನೀಡುವ ಮೂಲಕ ರಿಯಲ್ ಲೈಫ್ ನಲ್ಲೂ ಹೀರೋ ಎನಿಸಿಕೊಂಡಿದ್ದಾರೆ.
ಕೇವಲ ಇವರಷ್ಟೇ ಅಲ್ದೇ ಜೂನಿಯರ್ ಎನ್ ಟಿಆರ್ , ಮಹೇಶ್ ಬಾಬು ಅವರು ಕೂಡ ಪ್ರವಾಹದಿಂದ ಹಾನಿಗೊಳಗಾದವರಿಗೆ ಸಹಾಯ ಮಾಡಲು ಆಂಧ್ರಪ್ರದೇಶ ಸಿಎಂ ಪರಿಹಾರ ನಿಧಿಗೆ ತಲಾ 25 ಲಕ್ಷ ರೂ. ದೇಣಿಗೆ ನೀಡಿದ್ದರು. ಇದೀಗ ಪ್ರಭಾಸ್ ನೆರವಿಗೆ ಮುಂದಾಗಿದ್ದಾರೆ.