Prabhas : ಒಂದೇ ವರ್ಷದೊಳಗೆ ಮದುವೆಯಾಗಲಿದ್ದಾರೆ ಬಾಹುಬಲಿ ಪ್ರಭಾಸ್
ಬಾಹುಬಲಿ ಖ್ಯಾತಿಯ ಭಾರತದ ಬಿಗ್ ಸ್ಟಾರ್ ಪ್ರಭಾಸ್ ಗೆ ಈಗ ಸುಮಾರು 42 ವರ್ಷ ಆದ್ರೂ ಇನ್ನೂವರೆಗೂ ಮದುವೆಯಾಗದೇ ಬ್ಯಾಚುಲರ್ ಆಗಿ ಉಳಿದಿದ್ದಾರೆ. ಪ್ರಭಾಸ್ ಸದ್ಯ ಭಾರತದ ಮೋಸ್ಟ್ ಡಿಸೈರೆಬಲ್ ಬ್ಯೂಚ್ಯುಲರ್…
ಪ್ರಸ್ತುತ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಮಾರ್ಚ್ 11 ರಂದು ಅವರ ರಾಧೆ ಶ್ಯಾಮ್ ಸಿನಿಮಾ ವಿಶ್ವಾದ್ಯಂತ 5 ಭಾಷೆಗಳಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡ್ತಿದೆ..
ಈ ನಡುವೆ ಪ್ರಭಾಸ್ ಮದುವೆ ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆಗಳನ್ನ ಮಾಡುತ್ತಿದ್ದು ,, ಕೆಲ ದಿನಗಳ ಹಿಂದೆ ಜ್ಯೋತಿಷಿಗಳೊಬ್ಬರು ನುಡಿದ ಭವಿಷ್ಯದ ಹೇಳಿಕೆ ವೈರಲ್ ಆಗ್ತಿದೆ..
ಆಚಾರ್ಯ ಕುಮಾರ್ ಎಂಬ ಜ್ಯೋತಿಷಿಗಳೊಬ್ಬರು ಇನ್ನೊಂದೇ ವರ್ಷದಲ್ಲಿ ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಅಲ್ಲದೇ ಇತ್ತೀಚೆಗೆ ಪ್ರಭಾಸ್ ಅವರು ರಾಧೆ ಶ್ಯಾಮ್ ಪ್ರಚಾರದ ಸಂದರ್ಶನವೊಂದ್ರಲ್ಲಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು.. ಬಾಹುಬಲಿ ನಂತರ ಮದುವೆಯಾಗುವುದಾಗಿ ಮನೆಯವ ಬಳಿ ಹೇಳಿಕೊಂಡಿದ್ದಾಗಿ ತಿಳಿಸಿದ್ದರು..
ಆದ್ರೆ ಸಾಹೋ , ರಾಧೆ ಶ್ಯಾಮ್ ಸಿನಿಮಾಗಳೇ ರಿಲೀಸ್ ಆದ್ರೂ ಮದುವೆಯಾಗಿಲ್ಲ.. ಆದ್ರೀಗ ಜ್ಯೋತಿಷಿಗಳು ಪ್ರಭಾಸ್ ಮದುವೆ ಬಗ್ಗೆ ನುಡಿದಿರುವ ಭವಿಷ್ಯ ಕುತೂಹಲ ಹುಟ್ಟುಹಾಕಿದೆ.
ಇನ್ಸ್ಟಾಗ್ರಾಮ್ ನಲ್ಲಿ ಜ್ಯೋತಿಷಿಗಳು ಈ ಬಗ್ಗೆ ಬರೆದುಕೊಂಡಿದ್ದು , 2022ನೇ ವರ್ಷ ಪ್ರಭಾಸ್ ಅವರ ಪಾಲಿಗೆ ವಿಶೇಷವಾಗಿರಲಿದೆ.. 2022 ರ ಅಕ್ಟೋಬರ್ ನಿಂದ 2023 ರ ಅಕ್ಟೋಬರ್ ಒಳಗೆ ಪ್ರಭಾಸ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ಧಾರೆ ಎಂದಿದ್ದಾರೆ..