ಹುಬ್ಬಳ್ಳಿ:ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ ಐಟಿ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ವಿಚಾರದಲ್ಲಿ ಪ್ರಜ್ವಲ್ ರೇವಣ್ಣ ಕಾನೂನಾತ್ಮಕವಾಗಿ ಶರಣಾಗಿದ್ದಾನೆ. ಎಸ್ ಐಟಿ ಪ್ರಾಮಾಣಿಕವಾಗಿ ನಡೆಸಬೇಕು ಎನ್ನುವುದು ರಾಜ್ಯದ ಜನರ ಒತ್ತಾಯ. ಅಲ್ಲದೇ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.
ಖಂಡಿತವಾಗಿಯೂ ಈ ಪ್ರಕರಣದಲ್ಲಿ ರಾಜಕಾರಣ ಬೆರೆತಿತ್ತು. ಕಾನೂನು ಪ್ರಕಾರ ಇಂತಹದ್ದನ್ನು ಪ್ರಚಾರ ಮಾಡುವುದು ಕಾನೂನು ವಿರುದ್ದವಾದದ್ದು. ಆ ನಿಟ್ಟಿನಲ್ಲಿ ಎಸ್ ಐಟಿ ಮುಂದುವರೆದು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ವಾಲ್ಮೀಕಿ ನಿಗಮದ ಸೂಪರಿಂಟೆಂಡೆಂಟ್ ಚಂದ್ರಶೇಖರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇದರಲ್ಲಿ ಬ್ಯಾಂಕ್ ಕೂಡ ಪಾತ್ರ ವಹಿಸಿದೆ. ಬ್ಯಾಂಕ್ ನ ನಿಯಮ ಪ್ರಕಾರ 10 ಕೋಟಿಗಿಂತ ಜಾಸ್ತಿ ವಹಿವಾಟುಗಳ ಕುರಿತಾಗಿ ಸಿಬಿಐ ತನಿಖೆ ನಡೆಯಬೇಕು ಅನ್ನುವುದು ಇದೆ. ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.