ಪ್ರಕಾಶ್ ರಾಜ್ ಅಭಿನಯಕ್ಕೆ ಮೆಗಾಸ್ಟಾರ್ ಫಿದಾ..!

1 min read

ಪ್ರಕಾಶ್ ರಾಜ್ ಅಭಿನಯಕ್ಕೆ ಮೆಗಾಸ್ಟಾರ್ ಫಿದಾ..!

ಹೈದರಾಬಾದ್ : ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಚಿತ್ರ ಟಿ ಟೌನ್ ನಲ್ಲಿ ಧೂಳ್ ಎಬ್ಬಿಸುತ್ತಿದೆ.

ಪವನ್ ಕಲ್ಯಾಣ್ ಪವರ್ ಗೆ ಬಾಕ್ಸ್ ಆಫೀಸ್ ಶೇಖ್ ಆಗುತ್ತಿದ್ದು, ಥಿಯೇಟರ್ ಗಳಲ್ಲಿ ಮೆಗಾ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಇನ್ನು ಈ ಚಿತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಎಲ್ಲರ ಮೆಚ್ಚುಗೆ ಕಾರಣರಾಗಿದ್ದಾರೆ.

ಸಿನಿಮಾದಲ್ಲಿ ಪವನ್ ಕಲ್ಯಾಣ್ ಗೆ ಎದುರಾಳಿ ಲಾಯರ್ ಆಗಿ ಖಡಕ್ ಡೈಲಾಗ್ ಹೊಡೆಯುವ ಪ್ರಕಾಶ್ ರಾಜ್ ಅಭಿನಯಕ್ಕೆ ಅಭಿಮಾನಿಗಳಷ್ಟೇ ಅಲ್ಲದೇ ಚಿರಂಜೀವಿ ಕೂಡ ಮಾರುಹೋಗಿದ್ದಾರೆ.

prakash-raj

ಅಲ್ಲದೆ ತಮ್ಮ ಟ್ವಿಟ್ಟರ್ ನಲ್ಲಿ ಪ್ರಕಾಶ್ ರಾಜ್ ರಂತಹ ಕಲಾವಿದ ಇದ್ದರೆ, ಸಹಜವಾಗಿ ಸಹ ಕಲಾವಿದರು ಪರ್ಫಾಮೆನ್ಸ್ ಕೂಡ ಹೆಚ್ಚಾಗುತ್ತದೆ.

ವಕೀಲ್ ಸಾಬ್ ಚಿತ್ರದಲ್ಲಿ ಅವರ ನಟನೆ ಅದ್ಭುತ, ಪವನ್ ಕಲ್ಯಾಣ್ ಮುಂದೆ ಉತ್ತಮವಾಗಿ ನಟಿಸಿದ್ದಾರೆ. ಶುಭಾಶಯಗಳು ಪ್ರಕಾಶ್, ಹೀಗೆ ಮುಂದುವರಿಸಿ ಎಂದು ಬರೆದುಕೊಂಡಿದ್ದಾರೆ.

ಮೆಗಾಸ್ಟಾರ್ ಟ್ವಿಟ್ ಗೆ ಪ್ರಕಾಶ್ ರಾಜ್, ಎಂದಿಗೂ ಸ್ಫೂರ್ತಿದಾಯಕ, ಎಂದಿಗೂ ಪ್ರೋತ್ಸಾಹಿಸುವ ಅಣ್ಣಾ.. ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd