ಬೈಬಲ್ ನಲ್ಲಿ ಏನಿದೆ..? ಬರಿ ಕ್ರೌರ್ಯ ತುಂಬಿದೆ : ಮುತಾಲಿಕ್
ಯಾದಗಿರಿ : ಬೈಬಲ್ ನಲ್ಲಿ ಏನಿದೆ..? ಬರಿ ಕ್ರೌರ್ಯ ತುಂಬಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಯಾದಗಿರಿಯಲ್ಲಿ ಮಾತನಾಡಿದ ಮುತಾಲಿಕ್, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶದಲ್ಲಿ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕು.
ಇಲ್ಲದಿದ್ದರೇ ಜನವರಿಯಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ವತಂತ್ರದ ಬಳಿಕ ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕಿತ್ತು,
ಕೋಟ್ಯಂತರ ಜನರನ್ನ ಮತಾಂತರ ಮಾಡುವಂತ ಕೆಲಸ ಆಗಿದೆ.
ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ಜಾರಿಗೆ ತಂದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಬೈಬಲ್ ನಲ್ಲಿ ಏನಿದೆ..? ಬರಿ ಕ್ರೌರ್ಯ ತುಂಬಿದೆ ಎಂದರು.









