ADVERTISEMENT
Saturday, October 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪರಿಷತ್ ಗದ್ದಲ | ನೂತನ ಉಪಸಭಾಪತಿ ಪ್ರಾಣೇಶ್ ಹಲವರಿಗೆ ನಿರ್ಬಂಧಕ್ಕೆ ಶಿಫಾರಸು..!

Kariyappa N by Kariyappa N
January 29, 2021
in Newsbeat, Politics, Samagra karnataka, ರಾಜ್ಯ
council
Share on FacebookShare on TwitterShare on WhatsappShare on Telegram

ಬೆಂಗಳೂರು: ಕಳೆದ ಡಿಸೆಂಬರ್ 15ರಂದು ವಿಧಾನಪರಿಷತ್‍ನಲ್ಲಿ ನಡೆದ ಗಲಾಟೆ, ಉಪಸಭಾಪತಿಗಳನ್ನು ಎಳೆದಾಡಿ ನೂಕಾಟಕ್ಕೆ ಸಂಬಂಧಿಸಿದಂತೆ ನೂತನ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಪ್ರಾಣೇಶ್ ಸೇರಿದಂತೆ ಹಲವು ಸದಸ್ಯರನ್ನು ಕಲಾಪದಿಂದ ನಿರ್ಬಂಧಿಸುವಂತೆ ಶಿಫಾರಸು ಮಾಡಿರುವುದು ಮತ್ತೆ ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ.
ಡಿ.15ರ ಘಟನೆಗೆ ಸಂಬಂಧಿಸಿದಂತೆ ಜೆಡಿಎಸ್‍ನ ಮರಿತಿಬ್ಬೇಗೌಡ ನೇತೃತ್ವದ ಸದನ ಸಮಿತಿಯ ಮಧ್ಯಂತರ ವರದಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಶಿಫಾರಸು ಮಾಡಿದೆ.


ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮೀ ನಿಯಮಗಳ ಪ್ರಕಾರ ಜವಾಬ್ದಾರಿ ನಿರ್ವಹಿಸಿಲ್ಲ. ಹೀಗಾಗಿ ಅಂತಿಮ ವರದಿ ಬರುವವರೆಗೂ ಪರಿಷತ್ ಕಾರ್ಯದರ್ಶಿಯಾಗಿ ಮುಂದುವರೆಯದಂತೆ ಸಮಿತಿ ಶಿಫಾರಸು ಮಾಡಿದೆ. ಜತೆಗೆ ಆಡಳಿತಾತ್ಮಕ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಬಗ್ಗೆ ಇಲಖಾವಾರು ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿದೆ.
ಉಪಸಭಾಪತಿ ಪೀಠದ ಮೇಲೆ ಕುಳಿತಿದ್ದ ಎಸ್.ಎಲ್. ಧರ್ಮೇಗೌಡ ಅವರು ಮೃತಪಟ್ಟಿರುವುದರಿಂದ ಅವರ ಮೇಲಿನ ವಿಚಾರಣೆಯನ್ನು ಕೈಬಿಡಲಾಗಿದೆ. ಆದರೆ, ಕಾನೂನುಬಾಹಿರವಾಗಿ ಉಪಸಭಾಪತಿಗಳನ್ನು ಸಭಾಪತಿ ಪೀಠದ ಮೇಲೆ ಕೂರಲು ಪ್ರೇರೇಪಿಸಿದ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಡಿಸಿಎಂ ಅಶ್ವತ್ಥ ನಾರಾಯಣ ಅವರು ಸರ್ಕಾರದ ಯಾವುದೇ ಜವಾಬ್ದಾರಿಯಲ್ಲಿ ಮುಂದುವರಿಯಬಾರದು ಎಂದು ಸಮಿತಿ ವರದಿಯಲ್ಲಿ ಹೇಳಿದೆ.

Related posts

ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ

ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ

October 9, 2026
ಮೇವು, ನೀರಿಲ್ಲದೆ ಜಾನುವಾರುಗಳ ಮಾರಾಟಕ್ಕೆ ರೈತರ ಅನಿವಾರ್ಯತೆ: ಬರದ ಕರಾಳ ಚಿತ್ರಣ

ಮೇವು, ನೀರಿಲ್ಲದೆ ಜಾನುವಾರುಗಳ ಮಾರಾಟಕ್ಕೆ ರೈತರ ಅನಿವಾರ್ಯತೆ: ಬರದ ಕರಾಳ ಚಿತ್ರಣ

October 9, 2026

ನೂತನ ಉಪಸಭಾಪತಿಗೂ ನಿರ್ಬಂಧ..!
ಜೊತೆಗೆ, ಸಭಾಪತಿಗಳ ಆಗಮನ ಪ್ರವೇಶ ದ್ವಾರ ಮುಚ್ಚಿ ಸಭಾಪತಿ ಬರುವುದನ್ನು ತಡೆದಿದ್ದ ಸದಸ್ಯರಾದ ಎಂ.ಕೆ. ಪ್ರಾಣೇಶ್, ವೈ.ಎ. ನಾರಾಣಸ್ವಾಮಿ, ಅರುಣ್ ಶಹಾಪುರ ಅವರರನ್ನು ಮುಂದಿನ ಎರಡು ಅಧಿವೇಶನದ ಕಲಾಪದಲ್ಲಿ ಭಾಗವಹಿಸದಂತೆ ನಿಬರ್ಂಧಿಸಲು ಶಿಫಾರಸು ಮಾಡಲಾಗಿದೆ.
ಈ ನಡುವೆ, ಎಂ.ಕೆ. ಪ್ರಾಣೇಶ್ ವಿಧಾನಪರಿಷತ್‍ನ ಉಪಸಭಾಪತಿಯಾಗಿ ಆಯ್ಕೆಯಾಗಿದ್ದು, ಸಮಿತಿಯ ಶಿಫಾರಸು ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಜತೆಗೆ ರಾಜ್ಯ ರಾಜಕೀಯದಲ್ಲಿ ಮತ್ತೆ ಸಂಘರ್ಷಕ್ಕೂ ಎಡೆ ಮಾಡಿಕೊಡುವ ಸಾಧ್ಯತೆ ಇದೆ.
ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮುನ್ನ ಆಡಳಿತ ಪಕ್ಷದವರ ಅಧ್ಯಕ್ಷರ ಪೀಠದಲ್ಲಿ ಕುಳಿತ ಚಂದ್ರಶೇಖರ ಪಾಟೀಲ್ ಅವರನ್ನು ಮುಂದಿನ ಒಂದು ಅಧಿವೇಶನದ ಕಲಾಪಕ್ಕೆ ನಿಬರ್ಂಧಿಸಲು ಶಿಫಾರಸು ಮಾಡಲಾಗಿದೆ.

council
ಉಪಸಭಾಪತಿಯನ್ನು ಪೀಠದಿಂದ ಬಲವಂತವಾಗಿ ಇಳಿಸಿದ ನಜೀರ್ ಅಹ್ಮದ್, ಎಂ. ನಾರಾಯಣಸ್ವಾಮಿ, ಶ್ರೀನಿವಾಸ್ ಮಾನೆ, ಪ್ರಕಾಶ್ ರಾಥೋಡ್ ಅವರ ಕೃತ್ಯವೂ ಸಾಬೀತಾಗಿರುವುದಾಗಿ ಸಮಿತಿ ಹೇಳಿದೆ. ಈ ಮೂವರನ್ನು ಮುಂದಿನ ಒಂದು ಅಧಿವೇಶನದ ಕಲಾಪದಲ್ಲಿ ಭಾಗವಹಿಸದಂತೆ ನಿಬರ್ಂಧಿಸಲು ಶಿಫಾರಸು ಮಾಡಲಾಗಿದೆ.
ಬಸವರಾಜ್ ಹೊರಟ್ಟಿ, ಕೆ.ಟಿ. ಶ್ರೀಕಂಠೇಗೌಡ ಮತ್ತು ಗೋವಿಂದರಾಜ್ ನಿಯಮಬಾಹಿರವಾಗಿ ಉಪಸಭಾಪತಿಯನ್ನು ಅಧ್ಯಕ್ಷರ ಪೀಠದ ಮೇಲೆ ಕೂರಿಸಿ ನಿಯಮಬಾಹಿರವಾಗಿ ಸದನ ನಡೆಸಲು ಯತ್ನಿಸಿದರು. ಉಪಸಭಾಪತಿಯನ್ನು ಕೆಳಗಿಳಿಸಿದ ನಂತರ ಅಶ್ವತ್ಥನಾರಾಯಣ ಜೊತೆ ಸೇರಿ ಶ್ರೀಕಂಠೇಗೌಡ ಮತ್ತು ಗೋವಿಂದರಾಜ್ ಮತ್ತೆ ಕೂರಿಸಲು ಯತ್ನಿಸಿರುವುದು ಸರ್ಕಾರಿ ಮತ್ತು ಖಾಸಗಿ ದೃಶ್ಯ ಮಾಧ್ಯಮಗಳ ಸಿಡಿಯಲ್ಲಿ ದೃಢಪಟ್ಟಿದೆ. ಈ ಮೂವರನ್ನು ಎರಡು ಅಧಿವೇಶನದ ಕಲಾಪಕ್ಕೆ ನಿಬರ್ಂಧಿಸಲು ಸಮಿತಿ ಶಿಫಾರಸು ಮಾಡಿದೆ.
ಒಟ್ಟಾರೆ, ಸಮಿತಿಯ ಶಿಫಾರಸನ್ನು ಸಭಾಪತಿಗಳು ಪಾಲಿಸಲು ಮುಂದಾಗುತ್ತಾರಾ.. ಅಷ್ಟರೊಳಗೆ ಹೊಸ ಸಭಾಪತಿಗಳ ಆಯ್ಕೆ ನಡೆದು ಸಮಿತಿಯ ಶಿಫಾರಸುಗಳು ಕಸದ ಬುಟ್ಟಿಗೆ ಸೇರುತ್ತವಾ ಎಂಬುದನ್ನು ಕಾದು ನೋಡಬೇಕಿದೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: dec.15 uproarkarnataka legislative councilMadhuswamipraneshrecommendation
ShareTweetSendShare
Join us on:

Related Posts

ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ

ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ

by Shwetha
October 9, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ರಾಜೀನಾಮೆ ಮತ್ತು ಸ್ಟಿಂಗ್ ಆಪರೇಷನ್ ಗಳ ಮಹಾ ಸಮರ ಶುರುವಾಗಿದೆ. ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮೂಲಕ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿದೆ...

ಮೇವು, ನೀರಿಲ್ಲದೆ ಜಾನುವಾರುಗಳ ಮಾರಾಟಕ್ಕೆ ರೈತರ ಅನಿವಾರ್ಯತೆ: ಬರದ ಕರಾಳ ಚಿತ್ರಣ

ಮೇವು, ನೀರಿಲ್ಲದೆ ಜಾನುವಾರುಗಳ ಮಾರಾಟಕ್ಕೆ ರೈತರ ಅನಿವಾರ್ಯತೆ: ಬರದ ಕರಾಳ ಚಿತ್ರಣ

by Shwetha
October 9, 2026
0

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯದ ಹಲವು ಭಾಗಗಳಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ರೈತರ ಸಂಕಷ್ಟ ಮತ್ತಷ್ಟು ತೀವ್ರಗೊಂಡಿದೆ. ಬೆಳೆಗಳಿಗೆ ನೀರಿನ ಕೊರತೆ ಎದುರಾಗಿರುವ ಬೆನ್ನಲ್ಲೇ, ಜಾನುವಾರುಗಳ...

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

ಮತ ಉಳಿಸಿ ದೇಶ ಉಳಿಸಿ: ಅಕ್ಟೋಬರ್ 10 ರಿಂದ ಬಿಜೆಪಿಯ ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಮಹಾಯಾತ್ರೆ- ಮತ ರಕ್ಷಕರ ಮೂಲಕ ಪ್ರತಿ ಹಳ್ಳಿಗೂ ಕಾಂಗ್ರೆಸ್ ಲಗ್ಗೆ

by Shwetha
October 9, 2026
0

ಬೆಂಗಳೂರು: ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕನ್ನು ಉಳಿಸಲು ಕಾಂಗ್ರೆಸ್ ಈಗ ಬೃಹತ್ ಹೋರಾಟಕ್ಕೆ ಸಜ್ಜಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು...

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ CJP ಪ್ರತಿಭಟನೆ: SIR ರದ್ದುಪಡಿಸುವಂತೆ ಒತ್ತಾಯ

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ CJP ಪ್ರತಿಭಟನೆ: SIR ರದ್ದುಪಡಿಸುವಂತೆ ಒತ್ತಾಯ

by Shwetha
October 9, 2026
0

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್...

ಬೊಗಳುವ ಯತ್ನಾಳ್ ಗೆ ಕಚ್ಚುವ ತಾಕತ್ತಿಲ್ಲ: ನಿಮ್ಮ ಡಿಎನ್‌ಎ ಬಗ್ಗೆ ನಮಗೆ ಸಂಶಯವಿದೆ- ಕಾಂಗ್ರೆಸ್ ನಾಯಕರನ್ನ ಟೀಕಿಸುವ ಮುನ್ನ ನಿಮ್ಮ ಮೂಲ ನೋಡಿ ಎಂದ ಪ್ರದೀಪ್ ಈಶ್ವರ್

ಬೊಗಳುವ ಯತ್ನಾಳ್ ಗೆ ಕಚ್ಚುವ ತಾಕತ್ತಿಲ್ಲ: ನಿಮ್ಮ ಡಿಎನ್‌ಎ ಬಗ್ಗೆ ನಮಗೆ ಸಂಶಯವಿದೆ- ಕಾಂಗ್ರೆಸ್ ನಾಯಕರನ್ನ ಟೀಕಿಸುವ ಮುನ್ನ ನಿಮ್ಮ ಮೂಲ ನೋಡಿ ಎಂದ ಪ್ರದೀಪ್ ಈಶ್ವರ್

by Shwetha
October 9, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹರಿತವಾದ ಮಾತುಗಳಿಗೆ ಹೆಸರಾದ ಇಬ್ಬರು ನಾಯಕರ ನಡುವೆ ಈಗ ಡಿಎನ್‌ಎ ಸಮರ ಶುರುವಾಗಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರನ್ನು ಸದಾ ಟೀಕಿಸುವ ಹಿರಿಯ ಶಾಸಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram