ಬೆಂಗಳೂರು : ಪ್ರಶಾಂತ್ ಸಂಬರಗಿ ಬಿಜೆಪಿ ಜೊತೆಯಲ್ಲಿ ಇಲ್ವಾ? ಹಾಗಂತ ನಾವು ಏನಾದ್ರೂ ಆರೋಪ ಮಾಡಿದ್ದೀವಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಡ್ರಗ್ ಮಾಫಿಯಾದಲ್ಲಿ ಜಮೀರ್ ಕೇಳಿ ಬರುತ್ತಿರುವ ಹಿನ್ನೆಲೆ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕ್ಯಾಸಿನೋಗೆ ಯಾರದೋ ಜೊತೆ ಹೋದರು ಅನ್ನೋದು ತಪ್ಪಲ್ಲ. ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿದ್ರೆ ತಪ್ಪು. ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕ ಜಮೀರ್ ಅಹ್ಮದ್ ಕ್ಯಾಸಿನೋಗೆ ಹೋಗಿರುವದನ್ನ ಒಪ್ಪಿಕೊಂಡಿದ್ದಾರೆ. ಈ ವಿಷಯದ ಕುರಿತು ನಾನು ಹೆಚ್ಚು ಮಾತನಾಡಲ್ಲ. ಬೇಕಿದ್ರೆ ಅವರನ್ನೇ ನೀವು ಕೇಳಬೇಕು. ನಾನು ವಿದೇಶಕ್ಕೆ ಹೋದಾಗ ಕ್ಯಾಸಿನೋ ಆಡುವ ಜಾಗವನ್ನ ನೋಡಿದ್ದೇನೆ. ಆದ್ರೆ ಅಲ್ಲಿ ಆಡಿಲ್ಲ. ಜಮೀರ್ ಕೊಲಂಬೋಗೆ ಹೋಗಿದ್ದು ಅಪರಾಧವಲ್ಲ ಎಂದು ಹೇಳಿದರು.
ಡ್ರಗ್ಸ್ ಬಹಳ ವರ್ಷದಿಂದಲೇ ಇದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದರೆ ನಿಷ್ಪಕ್ಷಪಾತವಾಗಿ ಆಗಲಿ ಎಂದ ಸಿದ್ದರಾಮಯ್ಯ, ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈ ಪ್ರಕರಣ ಬಳಸಿಕೊಳ್ಳಬಾರದು. ಪ್ರಕರಣದ ತನಿಖೆಯನ್ನ ರಾಜಕೀಯ ದುರುದ್ದೇಶದಿಂದ ನಡೆಸಬಾರದು. ಜಮೀರ್ ಡ್ರಗ್ಸ್ ದಂಧೆಯಲ್ಲಿದ್ದರಾ? ಅದು ಗೊತ್ತಿಲ್ಲ. ಇನ್ನು ಜಮೀರ್ ಡ್ರಗ್ಸ್ ಜಾಲದಲ್ಲಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಆರೋಪಿಸುತ್ತಾರೆ. ಪ್ರಶಾಂತ್ ಸಂಬರಗಿ ಬಿಜೆಪಿ ಜೊತೆಯಲ್ಲಿ ಇಲ್ವಾ? ಹಾಗಂತ ನಾವು ಏನಾದ್ರೂ ಆರೋಪ ಮಾಡಿದ್ದೀವಾ?. ರಾಜಕೀಯ ದುರುದ್ದೇಶದಿಂದ ಆರೋಪ ಮಾಡೋದು ತಪ್ಪು ಎಂದು ತಿಳಿಸಿದರು.
https://youtu.be/pDPQuy6Xvhk








