prashanth neel : ಪ್ರಭಾಸ್ ರಾವಣಂ ನೀಲ್ ಆಕ್ಷನ್ ಕಟ್; ತೆಲುಗಿನಲ್ಲಿ ಮತ್ತೊಂದು ಚಿತ್ರ ಘೋಷಿಸಿದ ನಿರ್ದೇಶಕ…
ಉಗ್ರಂ ಮತ್ತು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಇದೀಗ ಬಹು ಬೇಡಿಕೆಯ ನಿರ್ದೇಶಕ. ಸದ್ಯಕ್ಕೆ ಸಲಾರ್ ಚಿತ್ರೀಕರಣದಲ್ಲಿ ಬ್ಯೂಸಿಯಾಗಿರುವ ನೀಲ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಘೋಷಿಸುತ್ತಿದ್ದಾರೆ.
ಸಲಾರ್ ನಂತರ ಜೂನಿಯರ್ ಎನ್ ಟಿ ಆರ್ ಜೊತೆಗೊಂದು ಚಿತ್ರ ಮಾಡಬೇಕಿದೆ. ಇದರ ಜೊತೆಗೆ ಕೆಜಿಎಫ್ 3 ಕೂಡ ತೆರೆಗೆ ಬರಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಇಷ್ಟೆಲ್ಲದರ ನಡುವೆಯೂ ನಿರ್ದೇಶಕ ಪ್ರಶಾಂತ್ ನೀಲ್ ಮತ್ತೊಂದು ಚಿತ್ರ ವನ್ನ ಮಾಡಲು ಒಪ್ಪಿಕೊಂಡಿದ್ದಾರೆ.
ಪ್ರಭಾಸ್ ಜೊತೆ ಸಲಾರ್ ಸಿನಿಮಾದ ನಂತರ ಮತ್ಮೊಮ್ಮೆ ಈ ಕಾಂಬಿನೇಷನ್ ಒಂದಾಗುತ್ತಿದೆ. ಈ ಚಿತ್ರಕ್ಕೆ ರಾವಣಂ ಎಂದು ಹೆಸರಿಡಲಾಗಿದೆ. ಈ ವಿಷಯವನ್ನ ಸ್ವತಃ ನಿರ್ಮಾಪಕ ದಿಲ್ ರಾಜು ಖಾಸಗಿ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ವಿಷಯ ಕೇಳಿ ಪ್ರಭಾಸ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.
ಸಂದರ್ಶನದಲ್ಲಿ ಮಾತನಾಡುತ್ತಾ, ‘ನಮ್ಮ ಬ್ಯಾನರ್ ನಲ್ಲಿ ಮತ್ತೊಂದು ಭಾರೀ ಬಜೆಟ್ ಸಿನಿಮಾ ನಿರ್ಮಾಣವಾಗಲಿದೆ. ಈ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಆ ಸಿನಿಮಾದ ಹೀರೋ ಎಂದು ಘೋಷಿಸಿದ್ದಾರೆ. ಹಾಗಾಗಿ ಪ್ರಶಾಂತ್ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳನ್ನ ತೆಲುಗಿನಲ್ಲೇ ಮಾಡುತ್ತಿದ್ದಾರೆ.
ಪ್ರಶಾಂತ್ ನೀಲ್ ಸಲಾರ್ ಚಿತ್ರೀಕರಣ ಮುಗಿಸಿದ ನಂತರ ಜೂನಿಯರ್ ಎನ್ ಟಿ ಆರ್ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ, ಆನಂತರ ಕೆಜಿಎಫ್ ಮುಂದುವರೆದ ಭಾಗ ಚಾಪ್ಟರ್ 3 ಸೆಟ್ಟೇರಬೇಕಿದೆ. ಆನಂತರವೇ ಪ್ರಭಾಸ್ ಅಭಿನಯದ ಪೀರಿಯಾಡಿಕ್ ಚಿತ್ರ ರಾವಣಂ ಗೆ ಚಾಲನೆ ಸಿಗಲಿದೆ.
Prashanth Neel : Prabhas Ravanam Neel Action Cut; The director announced another film in Telugu…