ಪ್ರಭಾಸ್ 25ನೇ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಾರಾ ಪ್ರಶಾಂತ್ ನೀಲ್ – ಪೌರಾಣಿಕ ಸಿನಿಮಾದಲ್ಲಿ ಮತ್ತೆ ‘ಬಾಹುಬಲಿ’
ಸಲಾರ್ ಸಿನಿಮಾದಲ್ಲಿ ಬಾಹುಬಲಿ ಪ್ರಬಾಸ್ ಹಾಗೂ ಕಿಂಗ್ ಮೇಕರ್ ಪ್ರಶಾಂತ್ ನೀಲ್ ಜೊತೆಯಾಗಿ ಕೆಲಸ ಮಾಡ್ತಿದ್ದು, ಈ ಸಿನಿಮಾದ ಮೇಲೆ ಬಾರೀ ನಿರೀಕ್ಷೆ ಇದೆ.. ಇದರ ಬೆನ್ನಲ್ಲೇ ಪ್ರಸಾಂತ್ ನೀಲ್ ಪ್ರಭಾಸ್ ಜೊತೆಗೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.. ಪ್ರಭಾಸ್ 25ನೇ ಸಿನಿಮಾಗೆ ಪ್ರಶಾಂತ್ ನೀಲ್ ಈಗಾಗಲೇ ಕಥೆ ರೆಡಿ ಮಾಡಿಕೊಳ್ತಿದ್ದಾರೆ ಎಂದು ಸಹ ವದಂತಿಗಳು ಹರಿದಾಡ್ತಿದೆ.
ಬಾಹುಬಲಿ ಸಿನಿಮಾದ ನಂತರ ಇಂತಹ ಸಿನಿಮಾಗಳ ಕ್ರೇಜ್ ಹೆಚ್ಚಾಗಿದ್ದು, ಇದೇ ರೀತಿಯಾದ ಸಿನಿಮಾ ಮಾಡಬೇಕೆಂದು ನಿರ್ಮಾಪಕ ದಿಲ್ ರಾಜು ನಿರ್ಧರಿಸಿದ್ದರು ಎನ್ನಲಾಗಿದೆ. ಅಲ್ಲದೇ ಈ ಸಿನಿಮಾ ಸಲಾರ್ ಗಿಂತ ಮುಂಚೆಯೇ ಪ್ರಶಾಂತ್ ನೀಲ್ ಅವರ ಸಾರಥ್ಯದಲ್ಲಿ ಶುರುವಾಗಬೇಕಿತ್ತು ಎಂದೂ ಸಹ ಹೇಳಲಾಗ್ತಿದೆ.. ಹೀಗಾಗಿ ಪ್ರಭಾಸ್ ಗಾಗಿ ಪೌರಾಣಿಕ ಕಥೆ ರೆಡಿಮಾಡಿಕೊಳ್ತಿದ್ದಾರೆ ಪ್ರಶಾಂತ್ ನೀಲ್ ಎಂಬ ಸುದ್ದಿ ಭಾರೀ ಚರ್ಚೆಯಾಗ್ತಿದೆ.
ಸದ್ಯ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಸಿಯಾಗಿದ್ದಾರೆ. ಪ್ರಶಾಂತ್ ನೀಲ್ ಅವರು ಟಾಲಿವುಡ್ ನ ಯಂಗ್ ಟೈಗರ್ ಜ್ಯೂ. NTR ಜೊತೆಗೂ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ಇತ್ತೀಚಗೆ ಖಚಿತವಾಗಿದೆ.. ಇನ್ನೂ ಪ್ರಭಾಸ್ ಅವರು ಬಹುನಿರೀಕ್ಷೆಯ ‘ಆದಿಪುರುಷ್’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಸಲಾರ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ನಂತರ ನಾಗ್ ಅಶ್ವಿನ್ ಜೊತೆ ಚಿತ್ರವೊಂದನ್ನ ಮಾಡಲಿದ್ದು, ಇದಾದ ನಂತರ ಪ್ರಸಾಂತ್ ನೀಲ್ ಅವರ ಜೊತೆಗೆ ಮತ್ತೊಂದು ಸಿನಿಮಾದಲ್ಲಿ ನಟಿಸಬಹುದು ಎನ್ನಲಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.