ADVERTISEMENT
Thursday, April 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕಾರ್ಗಿಲ್ ಯುದ್ಧದ ನೆನಪುಗಳನ್ನು ಹಂಚಿಕೊಂಡ ಕರಾವಳಿಯ ಪ್ರವೀಣ್ ಶೆಟ್ಟಿ

admin by admin
July 25, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಭಾರತದ ಹೆಬ್ಬುಲಿಗಳ ಅಟ್ಟಹಾಸಕ್ಕೆ ಪತರುಗುಟ್ಟಿದ ಪಾಕಿಸ್ತಾನ ಕಾರ್ಗಿಲ್ ಬಿಟ್ಟು ಓಡಿಹೋಗಿ 21 ವರ್ಷಗಳು ಕಳೆದಿವೆ.. ಭಾರತೀಯ ಯೋಧರ ಧೈರ್ಯ, ಸಾಹಸ, ದೇಶಪ್ರೇಮದ ಪ್ರತೀಕವಾಗಿ ಕಾರ್ಗಿಲ್ ಭಾರತದಲ್ಲೇ ಉಳಿದಿದೆ. ತ್ರಿವರ್ಣ ಧ್ವಜ ಸ್ವಚ್ಛಂದವಾಗಿ ಹಾರುತ್ತಿದೆ. ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹುತಾತ್ಮರಾದವರ ಕಥೆಯೇ ರೋಮಾಂಚಕಾರಿ ಯಾದ್ರೆ, ಯುದ್ಧದಲ್ಲಿ ಗೆದ್ದು, ಭಾರತಮಾತೆಗೆ ವಿಜಯದ ತಿಲಕವಿಟ್ಟ ವೀರ ಸೇನಾನಿಗಳ ಹೋರಾಟ ಅದೊಂದು ಇತಿಹಾಸ. ಇಂತಹ ವೀರ ಸೇನಾನಿಗಳ ಪೈಕಿ ಕರಾವಳಿಯಲ್ಲಿ ಹೆಮ್ಮಯ ಯೋಧ ಪ್ರವೀಣ್ ಶೆಟ್ಟಿ ಕೂಡಾ ಒಬ್ಬರು.

ಕಾರ್ಗಿಲ್ ಯುದ್ಧದ ಸಂಧರ್ಭದಲ್ಲಿ ವಿಶ್ವದ ಏಕೈಕ 244 ಹೆವಿ ಮೋಟಾರ್ ರೆಜಿಮೆಂಟ್ ನಲ್ಲಿ ಕರ್ತವ್ಯ ದಲ್ಲಿದ್ದ ಮಂಗಳೂರಿನ ಕುಂಪಲ ನಿವಾಸಿ ಪ್ರವೀಣ್ ಶೆಟ್ಟಿ, ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದಾರೆ. 18 ವರ್ಷದಲ್ಲೇ ಸೇನೆ ಸೇರಿದ ಪ್ರವೀಣ್ ಶೆಟ್ಟಿ ಸೇನೆ ಸೇರಿದ ಎರಡು ವರ್ಷದಲ್ಲೇ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಬೇಕಾಯಿತು. ಊರಿಗೆ ಬಂದ ದಿನವೇ ಸೇನೆಯಿಂದ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಬುಲಾವ್ ಬಂತು. ಹಾಗಾಗಿ ತಕ್ಷಣವೇ ಮತ್ತೆ ಕರ್ತವ್ಯಕ್ಕೆ ತೆರಳಿದ ಪ್ರವೀಣ್ ಶೆಟ್ಟಿಗೆ ಕಂಡಿದ್ದು, ಬರೀ ಹೆಣಗಳ ರಾಶಿ. ಅಂದು ತನ್ನ ರೆಜಿಮೆಂಟ್ ನಲ್ಲಿದ್ದವರ ಛಿದ್ರ ಛಿದ್ರ ವಾದ ಹೆಣಗಳನ್ನು ನೋಡಿದ ಪ್ರವೀಣ್ ಶೆಟ್ಟಿ, ಒಂದು ಕ್ಷಣ ಅವಕ್ಕಾದರೂ ಮತ್ತೆ ಹೋರಾಡಿದ ರೀತಿ ಮಾತ್ರ ಆಶ್ಚರ್ಯಕಾರಕ.

Related posts

ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ

ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ

April 30, 2026
ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

April 30, 2026

ಶುತ್ರುಗಳ ರುಂಡ ಚೆಂಡಾಡಿದ್ದ ಪ್ರವೀಣ್

ಒಂದು ಕಡೆ ಜೊತೆಗಿದ್ದವರ ಮರಣ. ಮತ್ತೊಂದೆಡೆ ಶತ್ರುಗಳ ಅಟ್ಟಹಾಸ. ಹೌದು..! ಪ್ರವೀಣ್ ಶೆಟ್ಟಿ ಅಂದು ಅನ್ನಾಹಾರ ಯುದ್ಧ ಭೂಮಿಯಲ್ಲಿ ಹೋರಾಡಿದರು. ಯುದ್ಧ ಭೂಮಿಯ ಅತೀ ಮುಖ್ಯಭಾಗದ ಕಾರ್ಗಿಲ್ ನ ತೊಲೊಲಿಂಗ್ ಪ್ರದೇಶವನ್ನು ಪ್ರವೀಣ್ ಶೆಟ್ಟಿ ತಂಡ ವಶಪಡಿಸಿಕೊಂಡಿತು. ತನ್ನ ಜೊತೆ ಇದ್ದವರು ತನ್ನೆದುರೇ ಹುತಾತ್ಮರಾದರೂ ಛಲ ಬಿಡದ ಪ್ರವೀಣ್ ಶೆಟ್ಟಿ ತಂಡ 49 ಶತ್ರುಗಳನ್ನು ಹೊಡೆದುರುಳಿಸಿದ್ದರು.

ಕಾರ್ಗಿಲ್ ನಲ್ಲಿ ಶತ್ರುಗಳ ಮಾರಣ ಹೋಮ ನಡೆಸಿದ್ದ ಪ್ರವೀಣ್ ಶೆಟ್ಟಿ, ತಮ್ಮ 16 ವರ್ಷಗಳ ಕಾಲ ದೇಶ ಸೇವೆಯಲ್ಲಿ 8 ಸೇನಾ ಸೇವಾ ಪದಕಗಳನ್ನು ಗಳಿಸಿದ್ದಾರೆ. 9Years ಸೇನಾ ಪದಕ, 50years ಸೇನಾ ಪದಕ, ಫೀಲ್ಡ್ ಸೇನಾ ಪದಕ, ಡಬಲ್ ಫೀಲ್ಡ್ ಸೇನಾ ಪದಕ, ಆಪರೇಷನ್ ವಿಜಯ್, ಆಪರೇಷನ್ ರಕ್ಷಕ್, ಆಪರೇಷನ್ ಪರಾಕ್ರಮ್, ಆಪರೇಷನ್ ವಿಜಯ್ ಸ್ಟಾರ್ ಎಂಬ ಪದಕಗಳನ್ನು ಗಳಿಸಿದ್ದಾರೆ. ಅಂದಹಾಗೆ ಆಪರೇಷನ್ ವಿಜಯ್ ಸ್ಟಾರ್ ಪದಕ ಗಳಿಸಿದ ಕರಾವಳಿ ಕರ್ನಾಟಕದ ಏಕೈಕ ಯೋಧ ಪ್ರವೀಣ್ ಶೆಟ್ಟಿ.

ಸೇನೆಯಲ್ಲಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರವೀಣ್ ಶೆಟ್ಟಿ ಸದ್ಯ ಮಂಗಳೂರಿನ ಬಲ್ಮಠದಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ಸೆಕ್ಯೂರಿಟಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಒಟ್ಟಾರೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಭಾರತಮಾತೆಗೆ ವಿಜಯದ ತಿಲಕವಿಟ್ಟ ವೀರ ಸೇನಾನಿ ಪ್ರವೀಣ್ ಶೆಟ್ಟಿಯವರ ಕೆಚ್ಚೆದೆಯ ಹೋರಾಟಕ್ಕೆ ನಮ್ಮದೊಂದು ಸಲಾಂ.

Tags: indiaKargil warMangalore
ShareTweetSendShare
Join us on:

Related Posts

ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ

ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ

by Shwetha
April 30, 2026
0

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ವಿಶೇಷ ಸಹಾಯಕ...

ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

ಟಿಟಿಡಿಗೆ ಪ್ರತಿದಿನ 11 ಟನ್ ತುಪ್ಪ ಪೂರೈಕೆ – ಡಿಕೆ ಸುರೇಶ್ ಮಾಹಿತಿ

by Shwetha
April 30, 2026
0

ಬೆಂಗಳೂರು ಸಹಕಾರಿ ಹಾಲು ಒಕ್ಕೂಟವಾದ ಬೆಂಗಳೂರು ಮಿಲ್ಕ್ ಯುನಿಯನ್ ಲಿಮಿಟೆಡ್ (ಬಮೂಲ್) ಮತ್ತು ತಿರುಮಲ ತಿರುಪತಿ ದೇವಸ್ಥಾನಮ್ ನಡುವೆ ಮಹತ್ವದ ಒಪ್ಪಂದ ಕೈಗೊಳ್ಳಲಾಗಿದೆ. ಈ ಒಪ್ಪಂದದ ಪ್ರಕಾರ,...

ಒಪೆಕ್ ಒಕ್ಕೂಟಕ್ಕೆ ಗುಡ್ ಬೈ ಹೇಳಿದ ದುಬೈ – ಜಾಗತಿಕ ತೈಲ ಮಾರುಕಟ್ಟೆಗೆ ಶಾಕ್!

ಒಪೆಕ್ ಒಕ್ಕೂಟಕ್ಕೆ ಗುಡ್ ಬೈ ಹೇಳಿದ ದುಬೈ – ಜಾಗತಿಕ ತೈಲ ಮಾರುಕಟ್ಟೆಗೆ ಶಾಕ್!

by Shwetha
April 30, 2026
0

ಮಧ್ಯಪ್ರಾಚ್ಯದ ಪ್ರಮುಖ ತೈಲ ಉತ್ಪಾದಕ ದೇಶವಾದ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಈಗ ಒಪೆಕ್ ಒಕ್ಕೂಟದಿಂದ ಹೊರಬರುವುದಾಗಿ ಘೋಷಿಸಿದೆ. ಈ ಮಹತ್ವದ ನಿರ್ಧಾರ ಮೇ 1ರಿಂದ ಜಾರಿಗೆ...

ಬ್ಯಾಂಕಿಂಗ್ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 60  ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

ಬ್ಯಾಂಕಿಂಗ್ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ; ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 60 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

by Shwetha
April 30, 2026
0

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಉನ್ನತ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಬೇಕೆಂದು ಕನಸು ಕಾಣುತ್ತಿರುವ ಯುವಜನತೆಗೆ ಇದೀಗ ಬಂಪರ್ ಅವಕಾಶ ಎದುರಾಗಿದೆ. ದೇಶದ ಕೇಂದ್ರ ಬ್ಯಾಂಕ್ ಆಗಿರುವ...

ಏಳು ಅಮಾಯಕರ ಪ್ರಾಣ ಕಸಿದ ಮೃತ್ಯುರೂಪಿ ಮಳೆ: ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಮರುಗಿದ ಮೋದಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆದೇಶ

ಏಳು ಅಮಾಯಕರ ಪ್ರಾಣ ಕಸಿದ ಮೃತ್ಯುರೂಪಿ ಮಳೆ: ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಮರುಗಿದ ಮೋದಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆದೇಶ

by Shwetha
April 30, 2026
0

ಮಳೆರಾಯನ ಆರ್ಭಟಕ್ಕೆ ನಲುಗಿದ ಸಿಲಿಕಾನ್ ಸಿಟಿ ಶಿವಾಜಿನಗರದಲ್ಲಿ ಸಂಭವಿಸಿತು ಘನಘೋರ ದುರಂತ ಬೆಂಗಳೂರಿನಲ್ಲಿ ಏಪ್ರಿಲ್ 29ರ ಸಂಜೆ ಸುರಿದ ಅಲಿಕಲ್ಲು ಸಹಿತ ಧಾರಾಕಾರ ಮಳೆ ಭಾರಿ ಅವಾಂತರವನ್ನೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram