ನಾನು ಪರ್ಮನೆಂಟ್ ಗಿರಾಕಿ, ಬಾಡಿಗೆ ಗಿರಾಕಿಗಳ ಬಗ್ಗೆ ಮಾತನಾಡಲ್ಲ : ಪ್ರೀತಂ ಗೌಡ Preetam Gowda saaksha tv
ಹಾಸನ : ನಾನು ಪರ್ಮನೆಂಟ್ ಗಿರಾಕಿ, ಬಾಡಿಗೆ ಗಿರಾಕಿಗಳ ಬಗ್ಗೆ ಮಾತನಾಡಲ್ಲ ಎಂದು ಮಾಜಿ ಸಚಿವ ಎ.ಮಂಜು ಆರೋಪಕ್ಕೆ ಶಾಸಕ ಪ್ರೀತಂಗೌಡ ಟಾಂಗ್ ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನ ಜನ ಹತ್ತು ವರ್ಷದಿಂದ ನೋಡ್ತಿದ್ದಾರೆ, ಅವರನ್ನ ಮೂವತ್ತು ವರ್ಷದಿಂದ ನೋಡ್ತಿದ್ದಾರೆ. ಯಾರೂ ಮಾತಿಗೆ ಬದ್ದವಾಗಿರ್ತಾರೆ. ಯಾರೂ ಯಾವ್ಯಾವ ಪಾರ್ಟಿಗೆ ಯಾವ್ಯಾವ ಟೈಪಲಿ ಲಾಂಗ್ ಜಂಪ್ ಹಾರ್ತಾರೆ ಅನ್ನೋದು ಗೊತ್ತಿದೆ. ನಾನು ಬದುಕಿರುವವರೆಗೂ ಬಿಜೆಪಿ, ಸಾಯೋವರೆಗೂ ಬಿಜೆಪಿ. ಯಾರೂ ಮಾತನಾಡುತ್ತಿದ್ದಾರೆ ಅವರ ಬಾಯಲ್ಲಿ ಇವತ್ತು ಯಾವ ಪಕ್ಷ, ನಾಳೆ ಯಾವ ಪಕ್ಷ ಅಂದರೆ ಬಾಯಿ ಹೊರಳಲ್ಲ. ಅಂಥವರು ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಹಾಸನದ ಶಾಸಕರನ್ನು ಮನೆಯಲ್ಲಿ ಕೂರಿಸುತ್ತೇನೆ ಎಂಬ ನೂತನ ಎಂ.ಎಲ್.ಸಿ. ಸೂರಜ್ ರೇವಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಪ್ರೀತಂ ಗೌಡ, ನನ್ನ ಚುನಾವಣೆ ಬರಲಿ ರಾಜಕಾರಣ ಏನು ಅಂಥಾ ತೋರಿಸುತ್ತೇನೆ. ರಾಜಕಾರಣ ಮಾಡೋದು ಹೆಂಗೆ ಅಂಥಾ ಅವರಿಗೆ ಗೊತ್ತಿಲ್ಲದ ವಿದ್ಯೆಯನ್ನು ನಾನು ಹೇಳ್ಕೊತೀನಿ. ಅವರು ಹೇಳಿಕೊಟ್ಟಿರೋ ವಿದ್ಯೆ ಕಲಿತು ಆಗಿದೆ. ನನ್ನ ಚುನಾವಣೆಗೆ ಬರಲಿ ಯಾವ ಥರ ರಾಜಕಾರಣ ಮಾಡದು ಅಂತಾ ತೋರಿಸಿ ಕೊಡ್ತೀನಿ. ನಾನು ಯಾವುದಕ್ಕೂ ಹೆದರುವುದಿಲ್ಲ ತಲೆನೂ ಕೆಡಿಸಿಕೊಳ್ಳುವುದಿಲ್ಲ. ಏನಾದರೂ ಹೆದರುವ ಪರಿಸ್ಥಿತಿ ಇದ್ದರೆ ಅವರು ಹೆದರಬೇಕು ಎಂದು ಕಿಡಿಕಾರಿದರು.