MES ಪುಂಡರ ಹಾವಳಿ ಬಗ್ಗೆ ಪ್ರೇಮ್ ಆಕ್ರೋಶ : ರಾಜ್ಯದಲ್ಲಿ MES ಬ್ಯಾನ್ ಗೆ ಆಹ್ರಗ
ಹುಬ್ಬಳ್ಳಿ : ಬೆಳಗಾವಿಯಲ್ಲಿ ಇತ್ತೀಚೆಗೆ MES ಪುಂಡರ ಹಾವಳಿ ಹೆಚ್ಚಾಗಿದೆ.. ಮೊದಲು ನಮ್ಮ ಕರ್ನಾಟಕದ ಧ್ವಜವನ್ನ MES ಪುಂಡರು ಸುಟ್ಟರು.. ನಂತರ ನಮ್ಮ ಕನ್ನಡ ಪರ ಹೋರಾಟಗಾರರ ವಿರುದ್ಧ ಕೊಲೆ ಬೆದರಿಗೆ ಆರೋಪ ಹೊರಿಸಿ ಜೈಲಿಗೂ ಕಳುಹಿಸಿದ್ರು.. ಇದೀಗ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಧ್ವಂಸಗೊಳಿಸಿ ಅನಾಗರಿಕತೆ ಪ್ರದರ್ಶಿಸಿದ್ದಾರೆ.. ಈ ಬಗ್ಗೆ ಸ್ಯಾಂಡಲ್ ಉಡ್ ನಟರು ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ.. ಇದೀಗ ಹುಬ್ಬಳ್ಳಿಯಲ್ಲಿ ಈ ಬಗ್ಗೆ ಸ್ಯಾಂಡಲ್ ವುಡ್ ನಟ ನೆನಪಿರಲಿ ಪ್ರೇಮ್ ಆಕ್ರೋಶ ಹೊರಹಾಕಿದ್ದಾರೆ…
ಭಾತರದ ಸ್ಟಾರ್ ನಟರ ಸಿನಿಮಾಗಳ ರೆಕಾರ್ಡ್ ಮುರಿದ ‘ಸ್ಪೈಡರ್ ಮ್ಯಾನ್’..!
ಬೆಳಗಾವಿಯಲ್ಲಿ MES ಪುಂಡಾಟಿಕೆ ಹೀಗೆ ಮುಂದುವರೆದರೆ ರಾಜ್ಯದಲ್ಲಿ MES ಸಂಘಟನೆ ಬ್ಯಾನ್ ಆಗಬೇಕು ಎಂದು ಆಗ್ರಹಿಸಿದ್ದಾರೆ.. ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢರ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಪುಂಡಾಟಿಕೆಯಿಂದ ದೇಶದಲ್ಲಿ MESಗೆ ಒಳ್ಳೆಯ ಹೆಸರು ಬರಲ್ಲ. ರಾಜ್ಯದಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಭಾಂದವ್ಯದಿಂದ ಇದ್ದಾರೆ. ಆ ಭಾಂದವ್ಯವನ್ನ ಹಾಳು ಮಾಡುವಂತಹ ಕೆಲಸಕ್ಕೆ MES ಕೈ ಹಾಕಬಾರದು. ಯಾವುದೇ ಸಂಘಟನೆಗಳಿರಲಿ ಶಾಂತಿ ಕಾಪಾಡಬೇಕು ವ್ಯಕ್ತಡಿಸಿದ್ದಾರೆ.
ರಾಜ್ಯದಲ್ಲಿ ಮರಾಠಿ ಚಿತ್ರಗಳಿಗೂ ಹಾಗೂ ಹಿಂದಿ ಚಿತ್ರಗಳಿಗೂ ಅವಕಾಶ ನೀಡಲಾಗಿದೆ. ಎಂಇಎಸ್ನವರು ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ. MES ಬ್ಯಾನ್ ವಿಚಾರದಲ್ಲಿ ಸರ್ಕಾರದ ನಿಲುವು ಏನಿದೆಯೋ ಗೊತ್ತಿಲ್ಲ. ಆದರೆ ಕನ್ನಡಿಗರ ಮೇಲಿನ ದಬ್ಬಾಳಿಕೆ ಸಹಿಸಲ್ಲ. ಕನ್ನಡ ಚಿತ್ರರಂಗ ಹೋರಾಟಕ್ಕಿಳಿದರೆ ನಮ್ಮವರಿಗೆ ತೊಂದರೆಯಾಗಲಿದೆ ಎನ್ನುವ ಹಿನ್ನೆಲೆ ಶಾಂತ ರೀತಿಯಲ್ಲಿದ್ದಾರೆ ಎಂದಿದ್ದಾರೆ.