ಭಾತರದ ಸ್ಟಾರ್ ನಟರ ಸಿನಿಮಾಗಳ ರೆಕಾರ್ಡ್ ಮುರಿದ ‘ಸ್ಪೈಡರ್ ಮ್ಯಾನ್’..!
ಹಾಲಿವುಡ್ ನ ಬಹುನಿರೀಕ್ಷೆಯ ಸಿನಿಮಾ ಸ್ಫೈಡರ್ ಮ್ಯಾನ್ ಭಾರತದಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದೆ.. ರಿಲೀಸ್ ಆಗಿ ಮೂರ್ನಾಲ್ಕು ದಿನ ಕಳೆದ್ರುಹೌಸ್ ಫುಲ್ ಆಗಿದ್ದು, ಎಷ್ಟೋ ಜನರಿಗೆ ಟಿಕೆಟ್ ಗಳು ಕೂಡ ಲಭ್ಯವಿಲ್ಲದಂತಾಗಿದೆ.. ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್ನ ‘ಸ್ಪೈಡರ್ಮ್ಯಾನ್; ನೋ ವೇ ಹೋಮ್’ ಸಿನಿಮಾ ಭಾರತದಲ್ಲಿ ಮೊದಲ ದಿನದ ಕಲೆಕ್ಷನ್ನಲ್ಲಿಯೇ ದಾಖಲೆ ಬರೆದಿದೆ.
ಈ ಸಿನಿಮಾ ಭಾರತದ ಸ್ಟಾರ್ ನಟರ ಸಿನಿಮಾಗಳ ಗಳಿಕೆಯ ದಾಖಲೆಯನ್ನೇ ಹಿಂದಿಕ್ಕಿದೆ.. ಹಾಲಿವುಡ್ ಸಿನಿಮಾ ಸ್ಥಳೀಯ ಸ್ಟಾರ್ ನಟರ ಸಿನಿಮಾಗಳನ್ನೂ ಮೀರಿಸಿ ಕಲೆಕ್ಷನ್ ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆ ಆದ ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಬಹಳ ದೊಡ್ಡ ಮೊತ್ತ ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿತ್ತು.
ಆದರೆ ‘ಸೂರ್ಯವಂಶಿ’ ಸಿನಿಮಾದ ದಾಖಲೆ ಮುರಿದಿರುವ ‘ಸ್ಪೈಡರ್ಮ್ಯಾನ್’ ಮೊದಲ ದಿನವೇ ಬರೋಬ್ಬರಿ 33 ಕೋಟಿ ರುಪಾಯಿ ಗಳಿಕೆ ಮಾಡಿದೆ. ಭಾರತದ ಇನ್ಯಾವ ಸಿನಿಮಾವೂ ಮೊದಲ ದಿನ ಇಷ್ಟು ದೊಡ್ಡ ಮೊತ್ತ ಕಲೆಕ್ಷನ್ ಮಾಡಿಲ್ಲ.
ನವೆಂಬರ್ 05ರಂದು ಬಿಡುಗಡೆ ಆಗಿದ್ದ ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಮೊದಲ ದಿನ 22 ಕೋಟಿ ಹಣ ಗಳಿಸಿತ್ತು. ಇದು ಈ ವರ್ಷದ ದಾಖಲೆಯಾಗಿತ್ತು. ಆ ದಾಖಲೆಯನ್ನು ಸ್ಪೈಡರ್ಮ್ಯಾನ್ ಮುರಿದಿದೆ. 2019 ರಲ್ಲಿ ಬಿಡುಗಡೆ ಆಗಿದ್ದ ‘ಅವೇಂಜರ್ಸ್; ದಿ ಎಂಡ್ ಗೇಮ್’ ಸಿನಿಮಾ ಸಹ ಮೊದಲ ದಿನ ಭಾರಿ ಮೊತ್ತ ಕಲೆಕ್ಷನ್ ಮಾಡಿತ್ತು. ಆ ದಾಖಲೆಯನ್ನೂ ಕೂಡ ‘ಸ್ಪೈಡರ್ಮ್ಯಾನ್’ ಸಿನಿಮಾ ಮುರಿದಿದೆ. ‘ಸ್ಪೈಡರ್ಮ್ಯಾನ್; ನೋ ವೇ ಹೋಮ್’ ಸಿನಿಮಾ ಭಾರತದಲ್ಲಿ 2ಡಿ, 3ಡಿ, ಐಮ್ಯಾಕ್ಸ್ 3ಡಿ, 4ಡಿಎಕ್ಸ್ 3ಡಿ ತಂತ್ರಜ್ಞಾನದಲ್ಲಿ ವೀಕ್ಷಣೆಗೆ ಲಭ್ಯವಿದೆ.