Prem
ಇಂದು ನಿರ್ದೇಶಕ ಪ್ರೇಮ್ ಅವರು 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ºಜೋಗಿ ಪ್ರೇಮ್ ಹುಟ್ಟುಹಬ್ಬಕ್ಕೆ ಚಿತ್ರರಂಗದವರು, ಅಭಿಮಾನಿಗಳಿಂದ ಶುಭಾಯಗಳ ಮಹಾಪೂರವೇ ಹರಿದುಬರ್ತಾಯಿದೆ. ಅದ್ರಂತೆ ಅಭಿನಯ ಚಕ್ರವರ್ತಿ ಕಿಚ್ಚಿ ಸುದೀಪ್ ಅವರು ಸಾಮಾಜಿಕ ಜಾಲತಾಣದ ಮೂಲಕ ಪ್ರೇಮ್ ಅವರಿಗೆ ವಿಶ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ‘ಯಾವಾಗಲು ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ನನ್ನ ಸಹೋದರ ಪ್ರೇಮ್. ಈ ಅದ್ಭುತ ದಿನ ನಿನ್ನದಾಗಲಿ. ಹುಟ್ಟುಹಬ್ಬದ ಶುಭಾಶಯಗಳು’ ಎಂದು ಶುಭಹಾರೈಸಿದ್ದಾರೆ
ಈಗಾಗಲೇ ಕಿಚ್ಚನ ಜೊತೆಗೆ ಪ್ರೇಮ್ ಅವರು ಮೊದಲ ಸಿನಿಮಾ ದಿ ವಿಲನ್ ಅಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು, ಈ ಇಬ್ಬರ ನಡುವೆ ಉತ್ತಮ ಬಾಂದವ್ಯವಿದೆ. ಅಲ್ಲದೇ ಸುದೀಪ ಜೊತೆಗೆ ಮತ್ತೊಂದು ಸಿನಿಮಾ ಮಾಡೋ ಪ್ಲಾನ್ ನಲ್ಲಿ ಪ್ರೇಮ್ ಇದ್ದರೇ. ಶೀಘ್ರದಲ್ಲೇ ಇಬ್ಬರ ಕಾಂಬಿನೇಷನ್ ನ ಹೊಸ ಸಿನಿಮಾ ಅನೌನ್ಸ್ ಆಗಲಿದೆ ಎಂಬುದು ಸುದೀಪ್ ಅವರ ಬರ್ತ್ ಡೇ ದಿನ ಬಹಿರಂಗವಾಗಿತ್ತು. ಅಲ್ಲದೇ ಈ ಇಬ್ಬರ ಕಾಂಬಿನೇಷನ್ ನ ಮತ್ತೊಂದು ಸಿನಿಮಾಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.
Prem
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel