ಬ್ರಿಟನ್ ಕೊರೊನಾ ಆತಂಕದ ನಡುವೆಯೇ 13 ನೇ ಆವೃತ್ತಿಯ ಏರೋ ಇಂಡಿಯಾಗೆ ಸಿದ್ಧತೆ..!
ಕೊರೊನಾ ಹಾವಳಿ, ಬ್ರಿಟನ್ ಕೊರೊನಾ ಆತಂಕದ ನಡುವೆಯೂ ಏರೋ ಇಂಡಿಯಾ 2021ಕ್ಕೆ ಸಿದ್ಧತೆ ಭರದಿಂದ ಸಾಗ್ತಿದೆ. ಆದ್ರೆ 13ನೇ ಆವೃತ್ತಿಯ ಏರೋ ಇಂಡಿಯಾ ಶೋಗೆ ಸಜ ಜಮಾವಣೆ ವಿಚಾರದಲ್ಲಿ ಬಿಸಿ ತಟ್ಟಿದೆ. ಹೌದು ವೈಮಾನಿಕ ಪ್ರದರ್ಶನದಲ್ಲಿ ಜನಸಂದಣಿಯನ್ನ ನಿಯಂತ್ರಿತ ಸಂಖ್ಯೆಗೆ ಇಳಿಸಿದೆ. ಬೆಂಗಳೂರು ಹೊರವಲಯದ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನವನ್ನ ಆನ್ ಲೈನ್ ಹಾಗೂ ಟೆಲಿವಿಷನ್ ಮುಖಾಂತರ ನೋಡುವ ವ್ಯವಸ್ಥೆ ಮಾಡಲಾಗ್ತಾಯಿದೆ.
ಸಿನಿಮಾರಂಗದಲ್ಲಿ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ ನಮ್ಮ ‘ರಾಖಿಭಾಯ್’…!
ಸದ್ಯ ಫೆ. 3ರಿಂದ ಐದು ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ 13ನೇ ಆವೃತ್ತಿಯ ಏರ್ ಶೋ ನಡೆಯಲಿದೆ. ಈವರೆಗೆ 532 ಪ್ರದರ್ಶಕರು ಈವೆಂಟ್ಗಾಗಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಕೇವಲ 75 ವಿದೇಶಿ ಸಂಸ್ಥೆಗಳಿವೆ. ಇನ್ನೂ ಈಗಾಗಲೇ ಏರ್ ಶೋನಲ್ಲಿ ಪಾಲಿಸಬೇಕಾದ ಕೋವಿಡ್ ನಿವಾಮಳಿಗಳ ಮಾರ್ಗಸೂಚಿಯನ್ನ ರಿಲೀಸ್ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡುವುದು, ಎಲ್ಲ ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಸೇರಿದಂತೆ ಕೊರೊನಾ ಸಂಬಂಧಿ ಎಲ್ಲ ಮಾರ್ಗಸೂಚಿಗಳನ್ನ ಕೈಗೊಳ್ಳುವ ಬಗ್ಗೆ ಸೂಚಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel