ಭದ್ರತಾ ಲೋಪ – ರಾಷ್ಟ್ರಪತಿಗಳನ್ನ ಬೇಟಿಯಾದ ಮೋದಿ, ಕಳವಳ ವ್ಯಕ್ತಪಡಿಸಿದ ರಾಮ್ ನಾಥ್ ಕೋವಿಂದ್…
ಮೋದಿ ಬೆಂಗವಾಲು ಪಡೆಯ ಭದ್ರತಾ ಲೋಪಕ್ಕೆ ಸಂಬಂಧಿಸಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಪತಿಗಳನ್ನ ಬೇಟಿ ಮಾಡಿ ಮಾತುಕತೆ ನಡೆಸಿದರು.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು ಮತ್ತು ನಿನ್ನೆ ಪಂಜಾಬ್‌ನಲ್ಲಿ ತಮ್ಮ ಬೆಂಗಾವಲು ಪಡೆಯಲ್ಲಿ ಭದ್ರತಾ ಲೋಪದ ಬಗ್ಗೆ ಪ್ರತ್ಯಕ್ಷ ವಿವರವನ್ನು ಪಡೆದರು. ಅಧ್ಯಕ್ಷರು ಗಂಭೀರ ಲೋಪದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ.
ಈ ಸಭೆಯ ಬಗ್ಗೆ ಮೋದಿ ಕೂಡ ಟ್ವೀಟ್ ಮಾಡಿದ್ದಾರೆ. “ರಾಷ್ಟ್ರಪತಿ ಜಿ ಅವರನ್ನು ಬೇಟಿ ಮಾಡಿದ್ದೇನೆ. ಅವರ ಕಾಳಜಿಗೆ ಧನ್ಯವಾದಗಳು. ಸದಾ ಶಕ್ತಿಯ ಮೂಲವಾಗಿರುವ ಅವರ ಶುಭ ಹಾರೈಕೆಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ,’’ ಎಂದು ಪ್ರಧಾನಿ ಹೇಳಿದರು.
ಘಟನೆಯ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ವಿಷಾದ ವ್ಯಕ್ತಪಡಿಸಿದ್ದಾರೆ, ಆದರೆ ಮೋದಿಯವರ ಭದ್ರತೆಯಲ್ಲಿ ಲೋಪದೋಷದ ಬಗ್ಗೆ ಭಾರತೀಯ ಜನತಾ ಪಕ್ಷದ ಆರೋಪಗಳನ್ನು ತಿರಸ್ಕರಿಸಿದ್ದಾರೆ
ಈ ಕುರಿತು ಪಂಜಾಬ್ ಸರ್ಕಾರ ತನಿಖಾ ಸಮಿತಿಯನ್ನ ರಚಿಸಿದ್ದು ಮುರು ದಿನದಲ್ಲಿ ವರದಿ ಕೊಡಲಿದೆ, ಮೋದಿಯವರ ಭದ್ರತೆಯ ವಿಷಯದಲ್ಲಿ ಲೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಕೂಡ ದಾಖಲಾಗಿದೆ.
Called on Rashtrapati Ji. Thankful to him for his concern. Grateful for his good wishes, which are always a source of strength. @rashtrapatibhvn pic.twitter.com/g6Unl8WCJJ
— Narendra Modi (@narendramodi) January 6, 2022