ಭಾರತೀಯ ಯೋಧರಿಂದ ಮುಖಭಂಗಕ್ಕೆ ಒಳಗಾದ ಚೀನೀ ಸೈನಿಕರ ಮೇಲೆ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಕೆಂಡಾಮಂಡಲ
ಲಡಾಖ್, ಸೆಪ್ಟೆಂಬರ್08: ಲಡಾಖ್ ಗಡಿಯಲ್ಲಿ ಭಾರತೀಯ ಸೈನ್ಯದಿಂದ ಮುಖಭಂಗಕ್ಕೆ ಒಳಗಾದ ಚೀನಾ ಸೇನೆ ಮೇಲೆ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಕೆಂಡಾಮಂಡಲರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಗಸ್ಟ್ 29-30 ರ ಮಧ್ಯರಾತ್ರಿ ಲಡಾಖ್ ಗಡಿಯ ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ದಂಡೆಯಲ್ಲಿ ಚೀನೀ ಸೈನಿಕರು ಭಾರತದ ಗಡಿ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಕಾರ್ಯಚರಣೆಯನ್ನು ಭಾರತೀಯ ಸೈನ್ಯವು ವಿಫಲಗೊಳಿಸಿತ್ತು. ಅಷ್ಟೇ ಅಲ್ಲ ಭಾರತೀಯ ಸೈನ್ಯದ ಮತ್ತೊಂದು ವಿಶೇಷ ಘಟಕವು ಲಡಾಖ್ನ ಪಾಂಗೊಂಗ್ ತ್ಸೊದ ಉತ್ತರ ನದಿ ದಂಡೆಯ ಫಿಂಗರ್ 4 ರ ಉದ್ದಕ್ಕೂ ಇರುವ ಹಾದಿಗಳಲ್ಲಿ ತನ್ನ ಪ್ರಾಬಲ್ಯ ಮೆರೆದಿತ್ತು ಮತ್ತು ಅತೀ ಎತ್ತರದ ಫಿಂಗರ್ 4 ಪ್ರದೇಶವನ್ನು ವಶಪಡಿಸಿಕೊಂಡಿತ್ತು. ಇದೀಗ ಭಾರತೀಯ ಸೈನ್ಯವನ್ನು ಕೆಣಕಿ ಪೆಟ್ಟು ತಿಂದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ವೈಫಲ್ಯವನ್ನುಅಧ್ಯಕ್ಷ ಕ್ಸಿ ಜಿನ್ಪಿಂಗ್ ಖಂಡಿಸಿದ್ದಾರೆ ಎಂದು ಹೇಳಲಾಗಿದೆ.
ಭಾರತೀಯ ಸೇನೆ ನಡೆಸಿದ ಯಶಸ್ವಿ ಕಾರ್ಯಚರಣೆಗೆ ಚೀನಾ ಅಧ್ಯಕ್ಷ ಕೆರಳಿರುವ ಕ್ಸಿ ಜಿನ್’ಪಿಂಗ್ ತನ್ನ ಸೈನ್ಯವನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿಗಳು ತಿಳಿಸಿವೆ.
Xi is reportedly angered by Indian defiance along border
Read @ANI Story | https://t.co/TpuFymj1M2 pic.twitter.com/oG6qqTQMSI
— ANI Digital (@ani_digital) September 7, 2020