ಬಜೆಟ್ ಜಂಟಿ ಸಂಸತ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ : ಮುಖ್ಯಾಂಶಗಳು
ನವದೆಹಲಿ : ಬಜೆಟ್ ಜಂಟಿ ಸಂಸತ್ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮಾತನಾಡಿದ್ದು, ಈ ವೇಳೆ ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕ್ರಮಗಳನ್ನು ಹಾಡಿಹೊಗಲಿದ್ದಾರೆ.
ಭಾಷಣದ ಮುಖ್ಯಾಂಶಗಳು
ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಬಡವರಿಗೆ ಕೇಂದ್ರ ಸರ್ಕಾರವು ದಾಖಲೆ ಪ್ರಮಾಣದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಿಸಿದೆ.
ನನ್ನ ಸರ್ಕಾರವು ಯಾವುದೇ ಬಡವ ಹಸಿವಿನಿಂದ ಬಳಲುವುದಿಲ್ಲ ಎಂಬುದನ್ನು ಖಚಿತಪಡಿಸಿದೆ.
ಕೊರೊನಾ ಸಂದರ್ಭದಲ್ಲಿ ಮಹಿಳೆಯರು, ಬಡ ಹಿರಿಯ ನಾಗರಿಕರು ಮತ್ತು ರೈತರಿಗೆ ಉಚಿತ ಆಹಾರ ಧಾನ್ಯ ಮತ್ತು ನೇರ ನಗದು ಪಾವತಿಯನ್ನು ಸರ್ಕಾರ ಘೋಷಿಸಿತ್ತು.
ಹೆದ್ದಾರಿಗಳು, ಜಲಮಾರ್ಗಗಳು, ಸೇರಿದಂತೆ ಭಾರತದ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಪ್ರಗತಿಯ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ಕೊರೊನಾವ ಸಂಕಷ್ಟದ ನಡುವೆಯೂ ಭಾರತ ಹೂಡಿಕೆದಾರರಿಗೆ ಆಕರ್ಷಕ ತಾಣವಾಗಿದೆ.
ಕೊರೊನಾ ಸಂಕಷ್ಟದಿಂದ ಭಾರತೀಯರ ಪ್ರಾಣ ಉಳಿಸುವ ಪ್ರಯತ್ನಗಳ ಮಧ್ಯೆ ಆರ್ಥಿಕತೆಗೆ ಹಾನಿ ಉಂಟಾಗಿತ್ತು. ಈ ಹಾನಿಯಿಂದ ಚೇತರಿಸಿಕೊಳ್ಳಲು ದೇಶ ಪ್ರಾರಂಭಿಸಿದೆ.
ಕೃಷಿ, ಶಿಕ್ಷಣ, ತಂತ್ರಜ್ಞಾನ, ಹಣಕಾಸು ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಪ್ರಗತಿ, ಮಿಲಿಟರಿಯಲ್ಲಿ ಮಹಿಳೆಯರ ನೇಮಕಾತಿ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ‘ಜಲ ಜೀವನ್ ಮಿಷನ್’ ಬಗ್ಗೆ ಪ್ರಸ್ತಾಪಿಸಿದರು.
ಜಲ್ ಜೀವನ್ ಮಿಷನ್ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯಿಂದ ಪ್ರತಿ ಮನೆಗೂ ಕುಡಿಯುವ ನೀರು ತಲುಪುತ್ತೆ ಎಂದ ಅವರು,
ಈ ಅಭಿಯಾನದ ಅಡಿ ಇದುವರೆಗೆ 3 ಕೋಟಿ ಕುಟುಂಬಗಳಿಗೆ ನೀರು ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel