ಟಿವಿ, ಎಸಿ ಮತ್ತು ಫ್ರಿಡ್ಜ್ ಸೇರಿದಂತೆ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ…  

1 min read

ಟಿವಿ, ಎಸಿ ಮತ್ತು ಫ್ರಿಡ್ಜ್ ಸೇರಿದಂತೆ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ…

ಡಾಲರ್ ಎದುರು ಭಾರತೀಯ ರೂಪಾಯಿ ದಾಖಲೆಯ ಕುಸಿತ ಕಂಡಿರುವ ಹಿನ್ನಲೆಯಲ್ಲಿ  ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಮುಂದಿನ ತಿಂಗಳ ಪ್ರಾರಂಭದಿಂದ  ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗಲಿದೆ.  ಟೆಲಿವಿಷನ್, ವಾಷಿಂಗ್ ಮೆಷಿನ್ ಮತ್ತು ರೆಫ್ರಿಜರೇಟರ್ ನಂತಹ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆಗಳು ಶೇಕಡಾ 3 ರಿಂದ 5 ರಷ್ಟು ಹೆಚ್ಚಾಗಬಹುದು ಎಂದು ಉದ್ಯಮಿಗಳು ಅಭಿಪ್ರಾಯ ಪಟ್ಟಿದ್ದಾರೆ.

ರೂಪಾಯಿಯ ದುರ್ಬಲತೆ ಮತ್ತು ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಉತ್ಪಾದನಾ ವೆಚ್ಚದಲ್ಲಿ ಭಾರಿ ಹೆಚ್ಚಳವಾಗಿದೆ. ಹಾಗಾಗಿ ಹೆಚ್ಚಿನ ಹೊರೆಯನ್ನ ಗ್ರಾಹಕರೇ ಭರಿಸಬೇಕಾದ ಪರಿಸ್ಥಿತಿ ಇದೆ ಎಂದು ಕಂಪನಿಗಳು ತಿಳಿಸಿವೆ.

ಚೀನಾದಲ್ಲಿ  ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್‌ ವಿಧಿಸಲಾಗಿದೆ. ಇದರಿಂದಾಗಿ ಅನೇಕ ಹಡಗುಗಳು ಶಾಂಘೈ ಬಂದರಿನಲ್ಲಿ ನಿಂತಿವೆ. ಹಾಗಾಗಿ ಬಿಡಿಭಾಗಗಳ ಕೊರತೆಯ ಸಮಸ್ಯೆ ಹೆಚ್ಚಾಗಿದ್ದು,  ಆಮದುಗಳ ಅವಲಂಬಿತವಾಗಿರುವ ಅನೇಕ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.

ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವು ಉದ್ಯಮದ ಸಮಸ್ಯೆಗಳನ್ನು ಹೆಚ್ಚಿಸಿದೆ ಎಂದು ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಸಲಕರಣೆ ತಯಾರಕರ ಸಂಘ (ಸೀಮಾ) ಹೇಳಿದೆ.

ಸೀಮಾದ ಅಧ್ಯಕ್ಷ ಎರಿಕ್ ಬ್ರೆಗಾಂಜಾ ಮಾತನಾಡಿ  “ಕಚ್ಚಾ ವಸ್ತುಗಳ ಬೆಲೆಗಳು ಈಗಾಗಲೇ ಏರಿಕೆಯಾಗುತ್ತಿವೆ.  ಯುಎಸ್ ಡಾಲರ್ ಬಲಗೊಳ್ಳುತ್ತಿದ್ದ, ರೂಪಾಯಿ ದುರ್ಬಲಗೊಳ್ಳುತ್ತಿದೆ.  ಜೂನ್‌ನಿಂದ 3 ರಿಂದ 5 %  ಬೆಲೆ ಏರಿಕೆಯಾಗಲಿದೆ. ಕೆಲವು ಎಸಿ ತಯಾರಕರು ಮೇ ತಿಂಗಳಿನಲ್ಲಿಯೇ ಬೆಲೆಗಳನ್ನು ಹೆಚ್ಚಿಸಿದ್ದಾರೆ, ಇತರರು ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಜೂನ್‌ನಲ್ಲಿ ಬೆಲೆಗಳನ್ನು ಹೆಚ್ಚಿಸುತ್ತಾರೆ ಎಂದು ಹೇಳಿದ್ದಾರೆ…

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd