ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನ ಒಂದಲ್ಲಾ ಒಂದು ವಿಡಿಯೋ, ಫೋಟೋ ಸದ್ದು ಮಾಡುತ್ತಲೇ ಇರುತ್ತದೆ. ಅಂತೆಯೇ ಇದೀಗ ಚರ್ಚ್ ನಲ್ಲಿ ಆಶೀರ್ವದಿಸಲು ಬಂದ ಫಾದರ್ (Priest ) ಗೆ ಮುಗ್ದ ಬಾಲಕಿ ಹೈ ಫೈ (high five) ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವಿಡಿಯೋದಲ್ಲಿ ಬಾಲಕಿ ತನ್ನ ತಾಯಿಯೊಂದಿಗೆ ಚರ್ಚ್ ಗೆ ಬಂದಿದ್ದು, ಚರ್ಚ್ ಫಾದರ್ ಬಳಿ ಆಶೀರ್ವಾದ ಪಡೆಯಲು ತೆರಳಿದ್ದಾರೆ.
ಬಾಲಕಿ ಮುಂದೆ ಬರುತ್ತಿದ್ದಂತೆ ಫಾದರ್ ಸಹ ಬಾಲಕಿಗೆ ಆಶೀರ್ವಾದ ಮಾಡಲು ಕೈ ಮುಂದೆ ತರುತ್ತಾರೆ. ಇದನ್ನು ಗಮನಿಸಿದ ಬಾಲಕಿ ತನ್ನ ಕೈಯಿಂದ ಅವರಿಗೆ ಹೈ ಫೈ ಮಾಡಿದ್ದಾಳೆ.
Father is saying a blessing.
The innocence of a child.
They’re trying not to laugh.
Best thing you’ll see today… pic.twitter.com/8ueI8JLhnf
— Rex Chapman🏇🏼 (@RexChapman) October 21, 2020
ಈ ವಿಡಿಯೋವನ್ನು ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚರ್ಚ್‍ಮಾನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಫಾದರ್ ಆಶೀರ್ವದಿಸಲು ಕೈ ಮುಂದೆ ತಂದರೆ, ಮುಗ್ಧ ಬಾಲಕಿ ಹೈ ಫೈ ಮಾಡುತ್ತಾಳೆ. ಆಗ ಫಾದರ್ ನಗು ತಡೆಯಲು ಯತ್ನಿಸುತ್ತಾರೆ.
ತುಂಬಾ ಒಳ್ಳೆಯದನ್ನು ನೀವು ಇಂದು ನೋಡುತ್ತಿದ್ದೀರಿ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ವಿಡಿಯೋ ವೈರಲ್ : ಜೆಸಿಬಿ ಬಕೆಟ್ ನಿಂದ ಬೆನ್ನು ಉಜ್ಜಿಸಿಕೊಂಡ ವ್ಯಕ್ತಿ
ಸದ್ಯ ಈ ವಿಡಿಯೋಗೆ 28,900ಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಅಲ್ಲದೆ 6,300ಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.
ಬಾಲಕಿ ಹೈ ಫೈ ಮಾಡಿರುವುದು, ಫಾದರ್ ನಗುವಿನಲ್ಲಿ ತೇಲಿರುವ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel