ರಾಜಕೀಯ ಬಿಕ್ಕಟ್ಟು – ಸುಡಾನ್ ದೇಶದ ಪಿ ಎಂ ಗೃಹಬಂಧನ
ಸರಕಾರ ಮತ್ತು ಮಿಲಿಟಿರಿ ನಡುವಿನ ಜಗಳ ತಾರಕಕ್ಕೇರಿದ್ದು ಕ್ಷಿಪ್ರ ಕ್ರಾಂತಿಗೆ ಬೆಂಬಲ ನೀಡಲಿಲ್ಲ ನ್ನುವ ಕಾರಣಕ್ಕೆ ಸುಡಾನ್ ದೇಶದ ಪ್ರಧಾನಿ ಹಮ್‌ದೋಕ್ ಅವರನ್ನು “ಮಿಲಿಟರಿ ಪಡೆಗಳು” ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ಸುಡಾನ್ ದೇಶದ ಮಾಹಿತಿ ಸಚಿವಾಲಯ ತಿಳಿಸಿದೆ.
ಸೋಮವಾರ ಬೆಳಿಗ್ಗೆ ಮಿಲಿಟರಿ ಪಡೆಗಳು ಪ್ರಧಾನಿ ಮನೆಯನ್ನ ಸುತ್ತುವರೆದಿದ್ದು ಕೆಲ ಸಚಿವರು ಮತ್ತು ಅಧಿಕಾರಿಗಳು ಸೇರಿದಂತೆ ಪ್ರಧಾನಿಯನ್ನ ಬಂಧಿಸಿ ಅಜ್ಞಾತವಾಸದಲ್ಲಿ ಇರಿಸಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದ್ದಾರೆ. ಪ್ರಧಾನಿ ಬಂಧನದಿಂದ ದಂಗೆಯೆದ್ದಿರು ಜನ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಸುಡಾನ್ ನಿರಂಕುಶವಾಗಿದ್ದ ಓಮರ್ ಅಲ್ ಬಶೀರ ಅವರನ್ನ ಅಲ್ಲಿನ ಜನತೆ ಭಾರಿ ಪ್ರತಿಭಟನೆಯಿಂದ ಕೆಳಗಿಳಿಸಿ ಪ್ರಜಾಪ್ರಭುತ್ವವನ್ನ ಸ್ಥಾಪಿಸಿದ್ದರು. ಸುಡಾನ್ ನಾಗರಿಕರು ಮತ್ತು ಸೇನಾ ಪಡೆಗಳ ನಡುವೆ ಉದ್ವಿಗ್ನ ಸ್ಥಿತಿ ತೀವ್ರಗೊಂದ್ದು ಅಂತರ್ಜಾಲ ಮತ್ತು ದೂರವಾಣಿ ಸಂಪರ್ಕ ಸ್ಥಗಿತಗೊಂಡಿವೆ ಎಂದು ಸುಡಾನ್ ವೃತ್ತಿಪರರ ಸಂಘ ಹೇಳಿದೆ.