ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆಯಲಿರುವ ‘ತಲೈವ’..!
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಹಾಗೆ ನೋಡೋದಾದ್ರೆ ಇಂದು ರಜನಿ ಅವರಿಗೆ ಬಹಳ ಮಹತ್ವದ ದಿನ. ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿರುವುದು ಒಂದುಕಡೆಯಾದ್ರೆ, ಅವರ ಪುತ್ರಿ ಸೌಂದರ್ಯ ಅವರು ಅಭಿವೃದ್ಧಿ ಪಡಿಸಿರುವ ‘ಹೂಟೆ’ ಆ್ಯಾಪ್ ಲೋಕಾರ್ಪಣೆಗೊಳ್ತಿದೆ.
ಹೌದು.. ಈ ಬಗ್ಗೆ ಟ್ವೀಟ್ ಮಾಡಿರೋ ತಲೈವ… “ ಅಕ್ಟೋಬರ್ 25ರಂದು ನಾನು ದೆಹಲಿಯಲ್ಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಸ್ವೀಕರಿಸಲಿದ್ದೇನೆ. ಹಾಗೆಯೇ ನನ್ನ ಮಗಳು ಸೌಂದರ್ಯ ತಯಾರಿಸಿರುವ “ಹೂಟೆ” ಆ್ಯಾಪ್ ಜನರಿಗೆ ಅವರ ವಿಚಾರಗಳನ್ನ ಮಾತಿನ ಮೂಲಕ ಹೇಳಿ ಕೊಳ್ಳಲು ವೇದಿಕೆಯನ್ನ ಕಲ್ಪಿಸಲಿದೆ. ಅದರಲ್ಲಿ ಮೊದಲ ಧ್ವನಿ ನನ್ನದೇ ಆಗಿರಲಿದೆ ಎಂದು ಬರೆದುಕೊಂಡಿದ್ದಾರೆ.