ನವದೆಹಲಿ : ಭಾರತ ಸದಾ ಶಾಂತಿ ಬಯಸುತ್ತದೆ. ಪ್ರಚೋದಿಸಿದರೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ಭಾರತಕ್ಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೀನಾ ದೇಶಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇಂದು ನಡೆದ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸುವ ಮುನ್ನ ಲಡಾಖ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಮೌನಾಚರಣೆ ಮೂಲಕ ನರೇಂದ್ರ ಮೋದಿ ಯೋಧರಿಗೆ ಗೌರವ ಸಲ್ಲಿಸಿದರು. ಇದಾದ ಬಳಿಕ ಮಾತನಾಡಿದ ಅವರು, ನಮ್ಮ ಯೋಧರ ತ್ಯಾಗ ವ್ಯರ್ಥವಾಗುವುದಿಲ್ಲ. ಹಾಗಾಂತ ದೇಶದ ಜನರಿಗೆ ಭರವಸೆ ನೀಡುತ್ತೇನೆ. ಭಾರತ ಯಾವತ್ತಿಗೂ ಶಾಂತಿಯನ್ನ ಬಯಸುತ್ತದೆ. ಆದರೆ ನಮ್ಮ ವಿಚಾರಕ್ಕೆ ಬಂದರೆ ಸುಮ್ಮನೇ ಇರುವುದಿಲ್ಲ. ಎಂಥಹ ಪರಿಸ್ಥಿಯಲ್ಲೂ ತಕ್ಕ ಉತ್ತರ ನೀಡುವ ಸಾಮರ್ಥ್ಯವಿದೆ ಎಂದು ಚೀನಾಕ್ಕೆ ತಿರುಗೇಟು ನೀಡಿದರು.








