ADVERTISEMENT
Tuesday, May 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಮೋದಿಯವರೇ ನಿಮ್ಮ ಎಲೆಯಲ್ಲಿ ಆನೆ ಬಿದ್ದಿದೆ ನೋಡಿ ; ಪ್ರಧಾನಿ ಕುರ್ಚಿಯ ಘನತೆ ಮಣ್ಣುಪಾಲು ಮಾಡಿದ ಮೋದಿ : ಸಿದ್ದರಾಮಯ್ಯ

Shwetha by Shwetha
May 12, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನೀಡಿದ ಭಾಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ತೀಕ್ಷ್ಣವಾಗಿ ಮತ್ತು ಸರಣಿ ಪ್ರಶ್ನೆಗಳ ಮೂಲಕ ತಿರುಗೇಟು ನೀಡಿದ್ದಾರೆ. ತಮ್ಮ ಎಲೆಯ ಮೇಲೆ ಆನೆ ಬಿದ್ದಿದ್ದರೂ ಪರರ ಎಲೆಯ ಮೇಲಿರುವ ನೊಣ ಹುಡುಕುವ ಢೋಂಗಿ ಬುದ್ಧಿ ಪ್ರಧಾನಿಯವರದ್ದು ಎಂದು ಸಿದ್ದರಾಮಯ್ಯ ಅಣಕಿಸಿದ್ದಾರೆ.

ಯಾರಾಗಿ ಮಾತನಾಡುತ್ತಿದ್ದಾರೆ ಪ್ರಧಾನಿ?

Related posts

ಚಿನ್ನ ಖರೀದಿ ಬೇಡ ಪೆಟ್ರೋಲ್ ಉಳಿಸಿ ಎಂದ ಪ್ರಧಾನಿ ಮೋದಿ: ಇದು ನಿಮ್ಮ ಆಡಳಿತ ವೈಫಲ್ಯ ಎಂದು ಗುಡುಗಿದ ರಾಹುಲ್ ಗಾಂಧಿ

ಚಿನ್ನ ಖರೀದಿ ಬೇಡ ಪೆಟ್ರೋಲ್ ಉಳಿಸಿ ಎಂದ ಪ್ರಧಾನಿ ಮೋದಿ: ಇದು ನಿಮ್ಮ ಆಡಳಿತ ವೈಫಲ್ಯ ಎಂದು ಗುಡುಗಿದ ರಾಹುಲ್ ಗಾಂಧಿ

May 12, 2026
ಒಬ್ಬ ಮುಸಲ್ಮಾನನ ಮೇಲೆ ಕೈ ಇಟ್ಟರೂ ನಾವು ನಿಮ್ಮನ್ನು ಕೊಲ್ಲುತ್ತೇವೆ: ಕೊಲೆ ಬೆದರಿಕೆ ಹಾಕಿದ ಶಾಸಕ ಹುಮಾಯೂನ್ ಕಬೀರ್

ಒಬ್ಬ ಮುಸಲ್ಮಾನನ ಮೇಲೆ ಕೈ ಇಟ್ಟರೂ ನಾವು ನಿಮ್ಮನ್ನು ಕೊಲ್ಲುತ್ತೇವೆ: ಕೊಲೆ ಬೆದರಿಕೆ ಹಾಕಿದ ಶಾಸಕ ಹುಮಾಯೂನ್ ಕಬೀರ್

May 12, 2026

ಮೋದಿಯವರು ಬೆಂಗಳೂರಿನಲ್ಲಿ ಮಾತನಾಡಿದ್ದು ದೇಶದ ಪ್ರಧಾನಿಯಾಗಿಯೋ ಅಥವಾ ರಾಜ್ಯ ಬಿಜೆಪಿ ಅಧ್ಯಕ್ಷರಂತೆಯೋ ಅಥವಾ ವಿರೋಧ ಪಕ್ಷದ ನಾಯಕನಂತೆಯೋ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು. ಅವರ ಭಾಷಣದಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳ ಮುಚ್ಚಿಡುವ ಪ್ರಯತ್ನ ಮತ್ತು ರಾಜ್ಯ ಬಿಜೆಪಿಯ ಅಸಹಾಯಕತೆ ಎದ್ದು ಕಾಣುತ್ತಿತ್ತು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪ್ರಧಾನಿ ಹುದ್ದೆಯ ಘನತೆಗೆ ಕುಂದು

ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿಯಂತಹ ನಾಯಕರು ಪ್ರಧಾನಿ ಹುದ್ದೆಯ ಘನತೆಯನ್ನು ಎತ್ತಿ ಹಿಡಿದಿದ್ದರು. ಆದರೆ ಮೋದಿ ಅವರು ಸುಳ್ಳು, ಕೀಳು ಅಭಿರುಚಿ ಮತ್ತು ದ್ವೇಷದ ಭಾಷಣಗಳ ಮೂಲಕ ಈ ಉನ್ನತ ಹುದ್ದೆಯ ಮರ್ಯಾದೆಯನ್ನು ಮಣ್ಣುಪಾಲು ಮಾಡುತ್ತಿದ್ದಾರೆ. ಬೆಂಗಳೂರಿಗೆ ಬಂದಿದ್ದರೂ ಅವರು ಇನ್ನೂ ಪಂಚ ರಾಜ್ಯಗಳ ಚುನಾವಣಾ ಗುಂಗಿನಲ್ಲೇ ಇದ್ದಂತೆ ಕಾಣುತ್ತಿದ್ದಾರೆ ಎಂದು ಸಿಎಂ ಟೀಕಿಸಿದ್ದಾರೆ.

ಆರ್ಥಿಕ ವೈಫಲ್ಯ ಮತ್ತು ಬೆಲೆ ಏರಿಕೆ
ಭಾರತವನ್ನು 5 ತ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ ಮಾಡುತ್ತೇವೆ ಎಂದು ಬೀಗುತ್ತಿದ್ದ ಪ್ರಧಾನಿಗಳು ಇಂದು ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಯ ನಡುವೆ ಜನರಿಗೆ ಎಣ್ಣೆ, ಗೊಬ್ಬರ ಕಡಿಮೆ ಬಳಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಇದು ಯಾವ ರೀತಿಯ ಅಭಿವೃದ್ಧಿ? ವಿದೇಶಾಂಗ ನೀತಿಯ ಎಡಬಿಡಂಗಿತನದಿಂದ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ವೈಫಲ್ಯಕ್ಕೆ ಈಗ ಯಾರನ್ನು ದೂರುತ್ತೀರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕರ್ನಾಟಕದ ಆರ್ಥಿಕ ಶಕ್ತಿ

ದೇಶದ ತಲಾವಾರು ಆದಾಯ 2.11 ಲಕ್ಷ ರೂಪಾಯಿಗಳಿದ್ದರೆ, ಕರ್ನಾಟಕದ ತಲಾವಾರು ಆದಾಯ 4.33 ಲಕ್ಷ ರೂಪಾಯಿಗಳಷ್ಟಿದೆ. ದೇಶದ ಜಿಡಿಪಿ ದರ ಶೇಕಡಾ 7.4 ಆಗಿದ್ದರೆ, ಕರ್ನಾಟಕ ಶೇಕಡಾ 8.1 ರಷ್ಟು ಪ್ರಗತಿ ಸಾಧಿಸಿದೆ. ಜಿಎಸ್ಟಿ ಸಂಗ್ರಹದಲ್ಲೂ ರಾಜ್ಯ ಎರಡನೇ ಸ್ಥಾನದಲ್ಲಿದೆ. ರಾಜ್ಯವು ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುತ್ತಿದ್ದು, ಪ್ರಧಾನಿಗಳು ಸುಳ್ಳು ಆರೋಪ ಮಾಡುವ ಬದಲು ಅಂಕಿಅಂಶಗಳೊಂದಿಗೆ ತಯಾರಿ ನಡೆಸಲಿ ಎಂದು ಸಿಎಂ ಸಲಹೆ ನೀಡಿದ್ದಾರೆ.

ರಾಜ್ಯ ಬಿಜೆಪಿಯ ಪರಿಸ್ಥಿತಿ ಬುಟ್ಟಿಯಲ್ಲಿರುವ ಏಡಿಗಳಂತಾಗಿದೆ. ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಸ್ವಪಕ್ಷೀಯರೇ ಗುಂಪುಗಾರಿಕೆ ನಡೆಸುತ್ತಿದ್ದಾರೆ. ಇವರನ್ನು ನಿಯಂತ್ರಿಸುವ ಧೈರ್ಯ 56 ಇಂಚಿನ ಎದೆಯುಳ್ಳ ಪ್ರಧಾನಿಗೆ ಇಲ್ಲವೇ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ. ಮಿತ್ರಪಕ್ಷಗಳಿಗೆ ವಿಶ್ವಾಸದ್ರೋಹ ಮಾಡಿದ ಇತಿಹಾಸ ಹೊಂದಿರುವ ಮೋದಿ, ಕಾಂಗ್ರೆಸ್ ವಿರುದ್ಧ ಮಾತನಾಡುವುದು ಹಾಸ್ಯಾಸ್ಪದ. ಮೊದಲು ನಿಮ್ಮ ಮನೆಯನ್ನು ಭದ್ರಪಡಿಸಿಕೊಳ್ಳಿ, ಆಮೇಲೆ ನಮ್ಮ ಬಗ್ಗೆ ಮಾತನಾಡಿ ಎಂದು ಸಿಎಂ ಗುಡುಗಿದ್ದಾರೆ.

ShareTweetSendShare
Join us on:

Related Posts

ಚಿನ್ನ ಖರೀದಿ ಬೇಡ ಪೆಟ್ರೋಲ್ ಉಳಿಸಿ ಎಂದ ಪ್ರಧಾನಿ ಮೋದಿ: ಇದು ನಿಮ್ಮ ಆಡಳಿತ ವೈಫಲ್ಯ ಎಂದು ಗುಡುಗಿದ ರಾಹುಲ್ ಗಾಂಧಿ

ಚಿನ್ನ ಖರೀದಿ ಬೇಡ ಪೆಟ್ರೋಲ್ ಉಳಿಸಿ ಎಂದ ಪ್ರಧಾನಿ ಮೋದಿ: ಇದು ನಿಮ್ಮ ಆಡಳಿತ ವೈಫಲ್ಯ ಎಂದು ಗುಡುಗಿದ ರಾಹುಲ್ ಗಾಂಧಿ

by Shwetha
May 12, 2026
0

ಮಧ್ಯಪ್ರಾಚ್ಯದಲ್ಲಿ ಎದ್ದಿರುವ ಯುದ್ಧದ ಭೀತಿ ಮತ್ತು ಜಾಗತಿಕ ಆರ್ಥಿಕ ಅಸ್ಥಿರತೆಯ ಹಿನ್ನೆಲೆಯಲ್ಲಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕೆಲವು ಕಟ್ಟುನಿಟ್ಟಿನ ಸಲಹೆಗಳು ಈಗ...

ಒಬ್ಬ ಮುಸಲ್ಮಾನನ ಮೇಲೆ ಕೈ ಇಟ್ಟರೂ ನಾವು ನಿಮ್ಮನ್ನು ಕೊಲ್ಲುತ್ತೇವೆ: ಕೊಲೆ ಬೆದರಿಕೆ ಹಾಕಿದ ಶಾಸಕ ಹುಮಾಯೂನ್ ಕಬೀರ್

ಒಬ್ಬ ಮುಸಲ್ಮಾನನ ಮೇಲೆ ಕೈ ಇಟ್ಟರೂ ನಾವು ನಿಮ್ಮನ್ನು ಕೊಲ್ಲುತ್ತೇವೆ: ಕೊಲೆ ಬೆದರಿಕೆ ಹಾಕಿದ ಶಾಸಕ ಹುಮಾಯೂನ್ ಕಬೀರ್

by Shwetha
May 12, 2026
0

ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಈಗ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಮುರ್ಷಿದಾಬಾದ್ ಜಿಲ್ಲೆಯ ಭರತ್ ಪುರ ಕ್ಷೇತ್ರದ ಶಾಸಕ ಹುಮಾಯೂನ್ ಕಬೀರ್ ಅವರು ಪಶ್ಚಿಮ ಬಂಗಾಳದ ಪ್ರಮುಖ...

9 ವರ್ಷಗಳ ಬಳಿಕ ಚೀನಾಕ್ಕೆ ಅಮೆರಿಕ ಅಧ್ಯಕ್ಷರ ಭೇಟಿ

9 ವರ್ಷಗಳ ಬಳಿಕ ಚೀನಾಕ್ಕೆ ಅಮೆರಿಕ ಅಧ್ಯಕ್ಷರ ಭೇಟಿ

by Shwetha
May 12, 2026
0

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇ 13ರಿಂದ 15ರವರೆಗೆ ಚೀನಾಕ್ಕೆ ಮಹತ್ವದ ಅಧಿಕೃತ ಭೇಟಿ ನೀಡಲಿದ್ದಾರೆ. ಕಳೆದ...

ದಿನ ಭವಿಷ್ಯ (03-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (12-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 12, 2026
0

ದಿನ ಭವಿಷ್ಯ : 12-05-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಅದ್ಭುತವಾದ ದಿನವಾಗಿರುತ್ತದೆ. ನಿಮ್ಮ ರಾಶಿಯ ಅಧಿಪತಿ ಮಂಗಳನ ದಿನವಾದ್ದರಿಂದ ಕಾರ್ಯಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ....

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ 2026: ವೆಬ್‌ಸೈಟ್, ಡಿಜಿಲಾಕರ್ ಮತ್ತು ಉಮಾಂಗ್ ಆ್ಯಪ್ ಮೂಲಕ ರಿಸಲ್ಟ್ ನೋಡುವುದು ಹೇಗೆ?

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ 2026: ವೆಬ್‌ಸೈಟ್, ಡಿಜಿಲಾಕರ್ ಮತ್ತು ಉಮಾಂಗ್ ಆ್ಯಪ್ ಮೂಲಕ ರಿಸಲ್ಟ್ ನೋಡುವುದು ಹೇಗೆ?

by Shwetha
May 11, 2026
0

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 2026ನೇ ಸಾಲಿನ 12ನೇ ತರಗತಿ ಫಲಿತಾಂಶಗಳನ್ನು ಬಿಡುಗಡೆ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಲಕ್ಷಾಂತರ ವಿದ್ಯಾರ್ಥಿಗಳ ಎದಬಡಿತ ಹೆಚ್ಚಾಗಿದ್ದು, ಫಲಿತಾಂಶದ ಕ್ಷಣಗಣನೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram