ಸಾರಿಗೆ ನೌಕರರ ಪ್ರತಿಭಟನೆ – ಮುಷ್ಕರದ ಲಾಭ ಪಡೆಯಲು ಸಜ್ಜಾದ ಖಾಸಗಿ ಬಸ್ ಗಳ ಒಕ್ಕೂಟ..!
ನಾಳೆ ಸಾರಿಗೆ ನೌಕರರ ಮುಷ್ಕರ ಹಿನ್ನಲೆ, ಇದರ ಲಾಭ ಪಡೆಯಲು ಖಾಸಗಿ ಬಸ್ ಗಳ ಒಕ್ಕೂಟ ಮುಂದಾಗಿದೆ.
2000 ಕ್ಕೂ ಹೆಚ್ಚು ಖಾಸಗಿ ಬಸ್ ಗಳು ರಸ್ತೆಗಿಳಿದು ಪ್ರತಿಭಟನೆಯ ಲಾಭ ಪಡೆಯಲು ಸಜ್ಜಾಗಿವೆ.
ಒಟ್ಟು 9 ಸಾವಿರ ಸ್ಟೇಜ್ ಕ್ಯಾರಿಯರ್ ಖಾಸಗಿ ಬಸ್ ಗಳಿವೆ. ಇವುಗಳ ಪೈಕಿ 7 ಸಾವಿರ ಬಸ್ ಮಾತ್ರ ಸದ್ಯ ಕಾರ್ಯಾಚರಿಸುತ್ತಿವೆ.
ಉಳಿದ 2000 ಸಾವಿರ ಬಸ್ಗಳನ್ನ ನಾಳೆಯಿಂದ ಹಂತ ಹಂತವಾಗಿ ಬೇಡಿಕೆಗನುಗುಣವಾಗಿ ರಸ್ತೆಗಿಳಿಸ್ತೀವಿ.
ರಾಜ್ಯದ 14 ಜಿಲ್ಲೆಗಳಲ್ಲಿ ನಮ್ಮ ಸ್ಟೇಜ್ ಕ್ಯಾರಿಯರ್ ಬಸ್ಗಳಿವೆ.
ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣಕನ್ನಡ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮಂಡ್ಯ, ಮಡಿಕೇರಿ, ಬೆಂಗಳೂರು ಗ್ರಾಮಾಂತರ, ರಾಮನಗರ, ಬಳ್ಳಾರಿ, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚುವರಿ ಖಾಸಗಿ ಬಸ್ ಸಂಚಾರ ಮಾಡಲಿವೆ.
ಇನ್ನೂ ಬಸ್ ಗಳಲ್ಲಿ ದರ ಹೆಚ್ಚಳ ಇರುವುದಿಲ್ಲ ಎಂದು ಸ್ಟೇಟ್ ಖಾಸಗಿ ಬಸ್ ಸ್ಟೇಜ್ ಕ್ಯಾರಿಯೇಜ್ ಫೆಡರೇಷನ್ ಉಪಾಧ್ಯಕ್ಷ ಕೆ.ಕೆ. ಬಾಲಕೃಷ್ಣ ಮಾಹಿತಿ ನೀಡಿದ್ದಾರೆ.
