ಕೆಲಸದ ಅವಧಿಯಲ್ಲಿ ನಿದ್ರಾ ವಿರಾಮ ಘೋಷಿಸಿದ ಖಾಸಗಿ ಕಂಪನಿ
ಬೆಂಗಳೂರು: ಕಂಪನಿಯೊಂದು ಉದ್ಯೋಗಿಗಳಿಗೆ ಕೆಲಸದ ಅವಧಿಯಲ್ಲಿ ನಿದ್ರಾ ವಿರಾಮ ಘೋಷಿಸಿದೆ.
ಬೆಂಗಳೂರಿನ ಕೋರಮಂಗಲ ಮೂಲದ ಸ್ಟಾರ್ಟ್ ಅಪ್ ವೇಕ್ಫಿಟ್ ಸಲ್ಯೂಷನ್ ಕಂಪನಿ ತನ್ನ ಉದ್ಯೋಗಿಗಳಿಗೆ ಕೆಲಸದ ಅವಧಿಯಲ್ಲಿ ನಿದ್ರಾ ವಿರಾಮ ಘೋಷಿಸಿ ಸುದ್ದಿಯಲ್ಲಿದೆ. ಕೆಲಸದ ಕಾರ್ಯಕ್ಷಮತೆ ಹೆಚ್ಚಿಸಲು ವಿನೂತನ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.
Official Announcement 📢 #sleep #powernap #afternoonnap pic.twitter.com/9rOiyL3B3S
— Wakefit Solutions (@WakefitCo) May 5, 2022
ಸಂಸ್ಥೆ ಕರ್ತವ್ಯದ ಅವಧಿಯಲ್ಲಿ ಉದ್ಯೋಗಿಗಳಿಗೆ 30 ನಿಮಿಷದ ನಿದ್ರಾ ವಿರಾಮ ನೀಡಿ ಅಧಿಕೃತ ಘೋಷಣೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ವೇಕ್ಫಿಟ್ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅವರು ಸಹೋದ್ಯೋಗಿಗಳಿಗೆ ಮಧ್ಯಾಹ್ನ 2 ರಿಂದ 2.30ರ ನಡುವೆ ನಿದ್ರೆ ಮಾಡಬಹುದು ಎಂದು ತಿಳಿಸಿದ್ದಾರೆ.