ಪೋಷಕರೇ ಗಮನಿಸಿ : ಡಿ.20 ರಿಂದ ಖಾಸಗಿ ಶಾಲೆ, ಆನ್ ಕ್ಲಾಸ್ ಬಂದ್!
ಬೆಂಗಳೂರು : ಖಾಸಗಿ ಶಾಲೆಗಳ ಬೇಡಿಕೆಗಳಿಗೆ ಸರ್ಕಾರದಿಂದ ಯಾವುದೇ ರೀತಿ ಸ್ಪಂದನೆ ದೊರಕದ ಹಿನ್ನೆಲೆ ಖಾಸಗಿ ಶಾಲಾ ಒಕ್ಕೂಟದ (ರುಪ್ಸಾ) ಡಿ.20ರಿಂದ ಶಾಲೆ ಮುಚ್ಚಿ ಆನ್ ಲೈನ್ ಕ್ಲಾಸ್ ಬಂದ್ ಮಾಡಲು ನಿರ್ಧಾರ ಮಾಡಿದೆ.
ರಾಜ್ಯ ಸರ್ಕಾರ ನೂತನ ವರ್ಷದಿಂದ ಶಾಲೆಗಳನ್ನು ಪುನಾರಂಭಿಸಲು ಪ್ಲಾನ್ ಮಾಡಿಕೊಳ್ಳುತ್ತಿವೆ. ಇತ್ತ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಶಾಲೆಗಳನ್ನ ಮುಚ್ಚಲು ಖಾಸಗಿ ಶಿಕ್ಷಣ ಆಡಳಿತ ಮಂಡಳಿ ಮುಂದಾಗಿದೆ.
ಈ ಹಿಂದೆ ಜಿಲ್ಲಾ ಕೇಂದ್ರಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಖಾಸಗಿ ಶಾಲಾ ಒಕ್ಕೂಟದ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ವೇಳೆ ಡಿಸೆಂಬರ್ 10 ರ ಒಳಗೆ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಗಡುವು ನೀಡಿದ್ದರು.
ಇದಕ್ಕೆ ಸರ್ಕಾರ ಸ್ಪಂದಿಸದ ಹಿನ್ನೆಲೆ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಇಳಿಯಲು ಖಾಸಗಿ ಶಿಕ್ಷಣ ಆಡಳಿತ ಮಂಡಳಿ ನಿರ್ಧಾರ ಮಾಡಲಾಗಿದೆ. ಸುಮಾರು 10 ಸಾವಿರ ಖಾಸಗಿ ಶಾಲೆಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಿವೆ. ಈ ನಿರ್ಧಾರದಿಂದ ಲಕ್ಷಾಂತರ ಮಕ್ಕಳಿಗೆ ತೊಂದರೆಯಾಗಲಿದೆ.
ಇನ್ನು ಖಾಸಗಿ ಶಾಲೆಗಳ ಒಕ್ಕೂಟದ ಬೇಡಿಕೆಗಳೇನು.. ಅನ್ನೋದನ್ನ ನೋಡೋದಾದ್ರೆ..
ಆರ್ಥಿಕ ಸಂಕಷ್ಟದಲ್ಲಿರುವ ಶಾಲೆಗಳ ವಾಹನಗಳ ಸಾಲಗಳ ಮರುಪಾವತಿ ಮುಂದೂಡಬೇಕು.
124 ಶಾಲೆಗಳ ಮುಚ್ಚುವ ಆಲೋಚನೆ ನಿರ್ಧಾರ ಹಿಂಪಡೆಯಬೇಕು.
25 ವರ್ಷಗಳಿಂದ ಅನುದಾನಕ್ಕೆ ಒಳಪಡದೆ ಇದ್ದ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು.
ಖಾಸಗಿ ಶಾಲಾ ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು.
10-11-2020 ರಂದು ಸುತ್ತೋಲೆ ಮರು ಪರಿಶೀಲನೆಗೆ ಒತ್ತಾಯ.
ರಾಜ್ಯದಲ್ಲಿ ಇದುವರೆಗೂ ಸ್ವಾಭಾವಿಕ ಬೆಳವಣಿಗೆ ಅಡಿಯಲ್ಲಿ ಸಲ್ಲಿಸಿದ್ದ ತಿರಸ್ಕøತ ಅರ್ಜಿಯನ್ನು ಕೋವಿಡ್-19 ಪರಿಸ್ಥಿತಿ ಕಾಲಾವಕಾಶ ನೀಡಿ ಅನುಮತಿ ನೀಡುವುದು.
5 ಸಾವಿರ ಶಾಲೆಗಳ ನೋಂದಣಿಗೆ ಸಲ್ಲಿಸಿದ ಶಾಲೆಗಳ ಅರ್ಜಿಗಳನ್ನು ಅದಾಲತ್ ರೂಪದಲ್ಲಿ ಏಕಕಾಲಕ್ಕೆ ವಿಲೇವಾರಿ ಮಾಡಬೇಕು.
ಇವು ಖಾಸಗಿ ಶಾಲಾ ಒಕ್ಕೂಟಗಳ ಬೇಡಿಕೆಯಾಗಿದೆ. ಈ ಬೇಡಿಕೆಗಳನ್ನ ಈಡೇರಿಸುವವರೆಗೂ ಶಾಲೆ ತೆರೆಯುವುದಿಲ್ಲ. ಅಲ್ಲದೇ ಆನ್ ಲೈನ್ ಕ್ಲಾಸ್ ಕೂಡ ಬಂದ್ ಮಾಡಲು ಒಕ್ಕೂಟ ನಿರ್ಧಾರ ಮಾಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









