Priyank kharge | ನಿಮ್ಮ ಪ್ರಧಾನಿ ಪುಕ್ಸಟ್ಟೆ ಬಿರಿಯಾನಿ ತಿನ್ನೋಕೆ ಹೋಗಿದ್ರಲ್ಲ priyank-kharge-slams bjp leaders in bangalore
ಬೆಂಗಳೂರು : ಇಂದು ಆರ್ ಎಸ್ ಎಸ್ ಮತ್ತು ಬಿಜೆಪಿಗರನ್ನು ದೇಶಭಕ್ತರೆಂದು ಹೇಗೆ ಕರೆಯಲು ಸಾಧ್ಯ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, 52 ವರ್ಷ ಬೇಕಾಯಿತಾ ಆರ್ಎಸ್ಎಸ್.ಗೆ ರಾಷ್ಟ್ರಧ್ವಜ ಹಾರಿಸಲು. ಅನೇಕ ಯುದ್ದಗಳನ್ನು ಇದೇ ಧ್ವಜದಡಿ ಮಾಡಿದ್ದೇವೆ. ಯಾಕೆ ಪದೇ ಪದೇ ರಾಷ್ಟ್ರಧ್ವಜಕ್ಕೆ ಅವಮಾನ ಮಾಡ್ತಾರೆ. ಒಬ್ಬ ಆರ್ ಎಸ್ ಎಸ್ ಅವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗುರೋದು ತೋರಿಸಲಿ ಎಂದು ಸವಾಲ್ ಹಾಕಿದರು.
ಸಿಟಿ ರವಿ ಕೂಡ ಅಖಂಡ ಭಾರತದ ಕನಸು ಕಾಣ್ತಿದ್ದಾರೆ. ನಿಮ್ಮ ಪ್ರಧಾನಿ ಪುಕ್ಸಟ್ಟೆ ಬಿರಿಯಾನಿ ತಿನ್ನೋಕೆ ಹೋಗಿದ್ರಲ್ಲ ಆಗ ಹೇಳಬೇಕಿತ್ತು. ದಂಡಿ ಮಾರ್ಚ್, ಸ್ವಾತಂತ್ರ್ಯ ಹೋರಾಟದಲ್ಲಿ,ಸಂವಿಧಾನ ರಚನೆಯಲ್ಲಿ ಆರ್ ಎಸ್ ಎಸ್ ನವರು ಎಲ್ಲಿದ್ದರು ಎಂದು ಪ್ರಶ್ನಿಸಿದ ಪ್ರಿಯಾಂಕ್, ಮನುಸ್ಮೃತಿ ಬೇಕು ಎಂದು ಹೋರಾಟ ಮಾಡಿದರು . ರಾಷ್ಟ್ರಧ್ವಜ ಸರಿ ಇಲ್ಲ ಅಂದ್ರೆ ಅಂಬೇಡ್ಕರ್ಗೆ ಕೂಡ ಅವಮಾನ ಮಾಡಿದ ಹಾಗೆ ಅಲ್ವಾ ಎಂದು ಕಿಡಿಕಾರಿದರು.









