ಭಾರತಕ್ಕೆ ಸಹಾಯ ಮಾಡಿ ಎಂದು ಬೇಡಿಕೊಂಡ ಪ್ರಿಯಾಂಕಾ ಪತಿ ನಿಕ್ ಜೋನಸ್..!
ದೇಶದಲ್ಲಿ ಕೊರೊನಾ 2 ನೇ ಅಲೆ ಹಿಂದೆಂದಿಗಿಂತಲೂ ಅತಿ ಭಯಾನಕವಾಗಿ ಭಾರತೀಯರನ್ನ ಕಾಡಲಾರಂಭಿಸಿದೆ. ಅದ್ರಲ್ಲೂ ಕರ್ನಾಟಕದಲ್ಲಿ ಇದರ ಪ್ರಭಾಯ ಅತಿ ಭೀಕರವಾಗಿದೆ. ನಿತ್ಯ ದೇಶದಲ್ಲಿ ಸಾವಿರಾರು ಜನ ಚಿಕಿತ್ಸೆ ಫಲಿಸದೇ , ಆಕ್ಸಿಜನ್ ಕೊರೆತಯಿಂದು ಇನ್ನೂ ಕೆಲವರು ಬೆಡ್ ಸಿಗದೇ ಸಾಯುತ್ತಲೇ ಇದ್ದಾರೆ. ಇದ್ರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನ ಸ್ಟಾರ್ ನಟಿ ಹಾಗೂ ಹಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ನನ್ನ ದೇಶ ಸಂಕಷ್ಟದಲ್ಲಿದೆ. ದಯಮಾಡಿ ಭಾರತಕ್ಕೆ ಸಹಾಯ ಮಾಡಿ ಎಂದು ಅಮೆರಿಕಾದ ಅಧ್ಯಕ್ಷರಿ ಜೋ ಬೈಡೆನ್ ಅವರಿಗೆ ಮನವಿ ಮಾಡಿಕೊಂಡಿದ್ದರು.
ಭಾರತದ ಪರವಾಗಿ ಪೋಸ್ಟ್ ಹಾಕಿದ್ದು, ‘ ನನ್ನ ಹೃದಯ ಛಿದ್ರವಾಗಿದೆ. ಭಾರತ ಕೋವಿಡ್-19ನಿಂದ ನರಳುತ್ತಿದೆ. ಯುಎಸ್ ಅಗತ್ಯಕ್ಕಿಂತ 550ಮಿ ಹೆಚ್ಚಿನ ಲಸಿಕೆಯಸ ಬೇಡಿಕೆ ಇಟ್ಟಿದೆ. ಆದರೆ ನನ್ನ ದೇಶದ ಪರಿಸ್ಥಿತಿ ಸಂಕಷ್ಟದಲ್ಲಿದೆ. ನೀವು ತುರ್ತಾಗಿ ಭಾರತಕ್ಕೆ ಲಸಿಕೆ ಹಂಚಿಕೊಳ್ಳುತ್ತೀರಾ? ಎಂದು ಕೇಳಿ ಅಮೆರಿಕದ ಅಧ್ಯಕ್ಷ ಜೊ ಬೈಡನ್ ಅವರಿಗೆ ಟ್ಯಾಗ್ ಮಾಡಿದ್ದರು.
ಇದೀಗ ಪ್ರಿಯಾಂಕಾ ಚೋಪ್ರಾ ಪತಿ ಪಾಪ್ ಸಿಂಗರ್ ಹಾಗೂ ನಟ ನಿಕ್ ಜೋನಸ್ ಸಹ ಭಾರತಕ್ಕೆ ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ನಿಕ್ ಜೋನಸ್, ‘ಭಾರತಕ್ಕೆ ಸಹಾಯದ ಅಗತ್ಯವಿದೆ. ನಿಮ್ಮ ಕೈಲಿ ಏನಾಗುತ್ತದೆಯೋ ಆ ಸಹಾಯವನ್ನು ಭಾರತಕ್ಕಾಗಿ ಮಾಡಿ, ನಾನು ಭಾರತವನ್ನು ಪ್ರೀತಿಸುತ್ತೇನೆ’ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.