ಮೈಸೂರು: ಆಗಾಗ ವಿವಾದಗಳಿಂದಲೇ ಚರ್ಚೆಗೆ ಬರುವ ಪ್ರೊ. ಕೆ.ಎಸ್. ಭಗವಾನ್ (Pro. Bhagavan) ಅವರು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತಾನಡಿರುವ (Pro. Bhagavan) ಭಗವಾನ್, ”’ಹಿಂದು ಧರ್ಮ’ ಎಂಬುದು ಧರ್ಮವೇ ಅಲ್ಲ. ಹಿಂದು ಧರ್ಮ ಎಂದರೆ ಬ್ರಾಹ್ಮಣ ಎಂದರ್ಥ. ಹಿಂದು ಎಂದರೆ ಬ್ರಾಹ್ಮಣರು, ಉಳಿದವರೆಲ್ಲ ಶೂದ್ರರು.

ಶೂದ್ರರು ಎಂದರೆ ಮನುಸ್ಮೃತಿಯಲ್ಲಿ ವೇಶ್ಯೆಯರು ಎಂಬುದು ಉಲ್ಲೇಖವಾಗಿದೆ” ಎಂದು ಹೇಳುವ ಮೂಲಕ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
“ಗ್ರಾಮೀಣರಿಗೆ ಹಿಂದು ಎಂದರೆ ಗೊತ್ತೇ ಇಲ್ಲ. ಅವರನ್ನು ನೀವು ಯಾವ ಧರ್ಮ ಎಂದರೆ ವಕ್ಕಲಿಗ, ಕುರುಬ, ಎಂದು ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ.
ಹೀಗಾಗಿ ಹಿಂದು ಪದವನ್ನ ತೆಗೆದು ಹಾಕಬೇಕು” ಎಂದು ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








